ಕರ್ನಾಟಕ

karnataka

ETV Bharat / state

ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆರೋಪಕ್ಕೆ ಯತ್ನಾಳ್​ ಗರಂ - ಬಿಜೆಪಿ ಕಚೇರಿ ಸುದ್ದಿ

ಬಿಜೆಪಿ ಕಚೇರಿಗೆ ಲಿಂಗಾಯತ ನಾಯಕರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂಬ ವಿಚಾರ ಕುರಿತು ಮಾತನಾಡಿದ ಶಾಸಕ ಯತ್ನಾಳ, ಈ ಕುರಿತು ನನಗೆ ಸಂಪೂರ್ಣ ಮಾಹಿತಿ‌ ಇಲ್ಲ. ನಮ್ಮ ರಾಜಾಧ್ಯಕ್ಷರು ಹಿಂದೂ ಪರ ಚಿಂತಕರು ಹಾಗೂ ಅತ್ಯಂತ ಒಳ್ಳೆಯ ವ್ಯಕ್ತಿ. ಅವರು ಹಾಗೆ ಮಾಡೋದಿಲ್ಲ ಎಂಬ ವಿಶ್ವಾಸ ಇದೆ‌ ಎಂದಿದ್ದಾರೆ.

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ

By

Published : Oct 15, 2019, 5:03 PM IST

ವಿಜಯಪುರ:ಸುಳ್ಳನ್ನೇ ದಾರಿ ಮಾಡಿಕೊಂಡು ಲೀಡರ್ ಆಗಲು ಹೊರಟಿದ್ದಾರೆ ಎಂದಿದ್ದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿಕೆಗೆ 'ಬೀದಿ‌ನಾಯಿಗಳಿಗೆ ಉತ್ತರ ನೀಡುವುದಿಲ್ಲ' ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಟ್ಟಣಶೆಟ್ಟಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಗರಂ ಆದರು.

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​

ಇನ್ನು, ರಾಜ್ಯದಲ್ಲಿ ಮೂರುವರೆ ವರ್ಷಗಳ ಕಾಲ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಲಿ ಎಂಬುದು ಸಿದ್ದರಾಮಯ್ಯ ‌ಮತ್ತು ಕುಮಾರಸ್ವಾಮಿಯವರ ಆಶಯವಾಗಿದೆ. ಸರ್ಕಾರಕ್ಕೆ ಬಜೆಟ್ ಮಂಡಿಸಲು‌ ಸಹಕಾರ ನೀಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲವೆಂದು ಯತ್ನಾಳ್​ ಹೇಳಿದ್ದಾರೆ.

ಇನ್ನು, ಬಿಜೆಪಿ ಕಚೇರಿಗೆ ಲಿಂಗಾಯತ ನಾಯಕರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂಬ ವಿಚಾರ ಕುರಿತು ಮಾತನಾಡಿದ ಶಾಸಕ ಯತ್ನಾಳ, ಈ ಕುರಿತು ನನಗೆ ಸಂಪೂರ್ಣ ಮಾಹಿತಿ‌ ಇಲ್ಲ. ನಮ್ಮ ರಾಜಾಧ್ಯಕ್ಷರು ಹಿಂದೂ ಪರ ಚಿಂತಕರು ಹಾಗೂ ಅತ್ಯಂತ ಒಳ್ಳೆಯ ವ್ಯಕ್ತಿ ಇದ್ದಾರೆ. ಅವರು ಹಾಗೆ ಮಾಡೋದಿಲ್ಲ ಎಂಬ ವಿಶ್ವಾಸ ನನಗಿದೆ ಎಂದರು.

ABOUT THE AUTHOR

...view details