ಕರ್ನಾಟಕ

karnataka

ETV Bharat / state

ಏಕವಚನದಲ್ಲಿ ಮಾತನಾಡುವುದು ಅವರ ಸಂಸ್ಕ್ರತಿ ತೋರಿಸುತ್ತದೆ.. ರೇಣುಕಾಚಾರ್ಯ ಅವರಿಗೆ ಟಾಂಗ್ - Basanagowda Patil Yatnal outarage against Renukacharya in vijayapura

ನಾನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಬಗ್ಗೆ ಮಾತ್ರ ಮಾತನಾಡುತ್ತೇನೆ. ನನ್ನ ಹೋರಾಟ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ವಿರುದ್ಧ ಮಾತ್ರ. ನನ್ನ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೋ ನೊಡೋಣ..

basanagowda-patil-yatnal
ಶಾಸಕ ಬಸನಗೌಡ ಪಾಟೀಲ ಯತ್ನಾಳ್​

By

Published : Mar 21, 2021, 5:04 PM IST

ವಿಜಯಪುರ :ಏಕವಚನದಲ್ಲಿ ಮಾತನಾಡುವುದು ಅವರ ಸಂಸ್ಕ್ರತಿ ತೋರಿಸುತ್ತದೆ ಎಂದು ಶಾಸಕ ರೇಣುಕಾಚಾರ್ಯ ಅವರ ಏಕವಚನದ ವಾಗ್ದಾಳಿ ವಿರುದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಾಳೆ ಸೋಮವಾರ ವಿಧಾನಸಭೆಯ ಪಡಸಾಲೆಯಲ್ಲಿ 25 ಶಾಸಕರು ಸಭೆ ಸೇರಿ ನಿನಗೆ ಸರಿಯಾದ ಉತ್ತರ ಕೊಡ್ತೀವಿ ಎಂಬ ರೇಣುಕಾಚಾರ್ಯ ಹೇಳಿಕೆಗೆ, ಅವರು ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಮೇ 2ರ ನಂತರ ಇದೆಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಮಾತನಾಡಿದರು

ಏಕವಚನದಲ್ಲಿ ಮಾತನಾಡುವುದು ಅವರ ಸಂಸ್ಕ್ರತಿ ತೋರಿಸುತ್ತದೆ. ನಾನು ಯಾರ ವಿರುದ್ಧವೂ ಏಕ ವಚನದಲ್ಲಿ ಮಾತನಾಡುವುದಿಲ್ಲ. ನನಗೆ ಸಂಸ್ಕಾರ ಇದೆ. ಅವರು ಒಬ್ಬ ಶಾಸಕ. ಹೀಗಾಗಿ, ನಾನು ಅವರ ಹಾಗೆ ಏಕ ವಚನದಲ್ಲಿ ಮಾತನಾಡುವುದಿಲ್ಲ. ಯಾವುದೇ ಶಾಸಕರ ಕುರಿತು ನಾನು ಹೇಳಿಕೆ ಕೊಡಲ್ಲ ಎಂದು ತಿಳಿಸಿದರು.

ಓದಿ:ತಾಕತ್ ಇದ್ರೆ ಸಿಎಂ ಬದಲಾವಣೆ ಮಾಡು: ಯತ್ನಾಳ್​ಗೆ ಸವಾಲು ಹಾಕಿದ ರೇಣುಕಾಚಾರ್ಯ

ನಾನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಬಗ್ಗೆ ಮಾತ್ರ ಮಾತನಾಡುತ್ತೇನೆ. ನನ್ನ ಹೋರಾಟ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ವಿರುದ್ಧ ಮಾತ್ರ. ನನ್ನ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೋ ನೊಡೋಣ ಎಂದರು.

For All Latest Updates

TAGGED:

ABOUT THE AUTHOR

...view details