ಕರ್ನಾಟಕ

karnataka

ETV Bharat / state

ಜಮೀರ್ ಅಹ್ಮದ್​ ಗೆ ತಾಕತ್​ ಇದ್ದರೆ ಪಾಕ್​ ಬಾರ್ಡರ್​​ನಲ್ಲಿ ಪ್ರತಿಭಟನೆ ಮಾಡಲಿ: ಯತ್ನಾಳ್​ - ಬಸನಗೌಡ​​ ಪಾಟೀಲ ಯತ್ನಾಳ ವಿಜಯಪುರ ಭೇಟಿ ಲೇಟೆಸ್ಟ್​​ ಸುದ್ದಿ

ವಿಜಯಪುರದಲ್ಲಿ ಜಮೀರ್​ ಅಹ್ಮದ್​ ವಿರುದ್ಧ ಶಾಸಕ ಬಸನಗೌಡ​​ ಪಾಟೀಲ ಯತ್ನಾಳ ಬಹಳ ಖಾರವಾಗಿ ವಾಗ್ದಾಳಿ ನಡೆಸಿದ್ದಾರೆ.

patil
ಜಮೀರ್ ಅಹ್ಮದ್​​ ವಿರುದ್ಧ ಬಸನಗೌಡ ಪಾಟೀಲ ವಾಗ್ದಾಳಿ

By

Published : Jan 13, 2020, 4:11 PM IST

ವಿಜಯಪುರ: ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಮನೆ ಎದುರು ಶಾಸಕ ಜಮೀರ್​​ ಅಹಮ್ಮದ್​​ ಧರಣಿ ಕುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯಿಸಿದ್ದಾರೆ.

ಜಮೀರ್ ಅಹ್ಮದ್​​ ವಿರುದ್ಧ ಬಸನಗೌಡ ಪಾಟೀಲ ವಾಗ್ದಾಳಿ

ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ತಾಕತ್ ಇದ್ರೆ , ಪಾಕಿಸ್ತಾನದ ಬಾರ್ಡರ್​​​ನಲ್ಲಿ ಕುಳಿತುಕೊಂಡು ಧೈರ್ಯ ತೋರಿಸಲಿ ಎಂದು ಜಮೀರ್​​ ಅಹ್ಮದ್​​ಗೆ ಸವಾಲು ಹಾಕಿದರು. ಜಮೀರ್ ಮೊದಲು ಯಡಿಯೂರಪ್ಪ ಮನೆ ಎದುರು ವಾಚ್​​ಮನ್ ಡ್ಯೂಟಿ ಮಾಡಲಿ. ಎಂಎಲ್ಎ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಅಂದ್ರು. ಯಡಿಯೂರಪ್ಪ ಸಿಎಂ ಆದರೆ ನಾನು ಅವರ ಮನೆ ಮುಂದೆ ವಾಚ್​ಮನ್ ಡ್ಯೂಟಿ‌ ಮಾಡುತ್ತೇನೆ ಎಂದು ಅವರೇ ಹೇಳಿದ್ದರು. ಅವರು ಹೇಳಿದ ಹಾಗೆ ನಡೆದುಕೊಳ್ಳಲಿ ಎಂದು ಯತ್ನಾಳ್ ವ್ಯಂಗ್ಯವಾಡಿದರು.

ಜಮೀರ್ ಈ‌ ಮೊದಲು ದೇಶದ ವಿರುದ್ಧ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ.ಈ ಕುರಿತು ಜಮೀರ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

For All Latest Updates

TAGGED:

ABOUT THE AUTHOR

...view details