ಕರ್ನಾಟಕ

karnataka

ETV Bharat / state

ಹೆಚ್​.ಡಿ.ಕೆ ಸಿನಿಮಾ ನಿರ್ಮಾಪಕರು ಅವರಿಗೆ ಎಡಿಕ್, ಕಟ್ ಅಂಡ್​ ಪೇಸ್ಟ್​ ಬಗ್ಗೆ ಗೊತ್ತು : ಯತ್ನಾಳ್ ವಾಗ್ದಾಳಿ - basanagouda patil yatnal reaction on siddaramaiah police statement

ಹೆಚ್​.ಡಿ. ಕುಮಾರಸ್ವಾಮಿ ಸಿನಿಮಾ ನಿರ್ಮಾಪಕರು, ಅವರಿಗೆ ವಿಡಿಯೋ ಎಡಿಟ್ ಮಾಡೋದು, ಕಟ್ ಆಂಡ್ ಪೇಸ್ಟ್ ಮಾಡೋದು ಚೆನ್ನಾಗಿ ಗೊತ್ತಿದೆ. ಯಾವುದೋ ಗಲಭೆಯದ್ದು ತಂದು ಇಲ್ಲಿ ಜೋಡಿಸೋದು, ಹಾಡಿನ ಮಧ್ಯೆ ಸೇರಿಸೋದು ಗೊತ್ತಿದ್ದವರು ಹೀಗೆ ಮಾಡ್ತಾರೆ, ಹೆಚ್ಡಿಕೆಯದ್ದು ನಾಟಕ ಕಂಪನಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

basanagouda-yatnal
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

By

Published : Jan 12, 2020, 8:20 PM IST

ವಿಜಯಪುರ:ಮಂಗಳೂರು ಗಲಭೆ ಹಿನ್ನೆಲೆ ಮಾಜಿ ಸಿಎಂ ಕುಮಾರಸ್ವಾಮಿ ಸಿಡಿ ಬಿಡುಗಡೆ ವಿಚಾರ, ಹೆಚ್ಡಿಕೆ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸಿನಿಮಾ ನಿರ್ಮಾಪಕರು, ಅವರಿಗೆ ವಿಡಿಯೋ ಎಡಿಟ್ ಮಾಡೋದು, ಕಟ್ ಆಂಡ್ ಪೇಸ್ಟ್ ಮಾಡೋದು ಚೆನ್ನಾಗಿ ಗೊತ್ತಿದೆ. ಯಾವುದೋ ಗಲಭೆಯದ್ದು ತಂದು ಇಲ್ಲಿ ಜೋಡಿಸೋದು, ಹಾಡಿನ ಮಧ್ಯೆ ಸೇರಿಸೋದು ಗೊತ್ತಿದ್ದವರು ಹೀಗೆ ಮಾಡ್ತಾರೆ, ಹೆಚ್ಡಿಕೆಯದ್ದು ನಾಟಕ ಕಂಪನಿ ಎಂದು ಕಿಡಿಕಾರಿದರು. ಕುಮಾರಸ್ವಾಮಿ ಏನು ಹರಿಶ್ಚಂದ್ರನ 16ನೇ ಸಂತತಿ ಅಲ್ಲ, ನಿಮ್ಮ ಮನೆಯಲ್ಲಿ ಏನಿದೆ ಅದನ್ನ ನೋಡಿಕೊಳ್ಳಿ.

ಕುಮಾರಸ್ವಾಮಿ ಸಿಡಿ ಬಿಡುಗಡೆ ವಿಚಾರವಾಗಿ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ

ಹೆಚ್​ಡಿಕೆ ಬ್ಲಾಕ್ ಮೇಲರ್

ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡ್ತೀನಿ ಎಂದು ಬೇಕಾಬಿಟ್ಟಿ ಬ್ಲಾಕ್ ಮೇಲ್ ತಂತ್ರ ಮಾಡ್ತಿದ್ದಾರೆ. ಅವರ ಸಿಡಿ ಬಿಡುಗಡೆ ಮಾಡ್ತೀನಿ, ಇವರ ಸಿಡಿ ಬಿಡುಗಡೆ ಮಾಡ್ತೀನಿ ಅಂತಾರೇ ಆದ್ರೆ ಅವರ ವಿಡಿಯೊಗಳೇ ಬಹಳ ಇವೆ, ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಬೇರೆಯವರ ತಟ್ಟೆಯಲ್ಲಿನ ನೋಣ ನೋಡ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯಗೆ ನಾಚಿಕೆ ಆಗ್ಬೇಕು

ಪೊಲೀಸ್ ಆಡಳಿತದ ಬಗ್ಗೆ ಸಂಶಯದಿಂದ ನೋಡುವುದು, ಅವರ ಬಗ್ಗೆ ಮಾತಾಡುವ ಮಾಜಿ ಸಿಎಂ ಸಿದ್ದರಾಮಯ್ಯ ಗೆ ನಾಚಿಕೆ ಆಗ್ಬೇಕು. ಸಿಎಂ ಆಗಿ ಕೆಲಸ ಮಾಡಿದವರು ಹೀಗೆ ಮಾತಾಡಬಾರದು ಎಂದು ಕಿಡಿಕಾರಿದರು.

ಪೌರತ್ವದಿಂದ ಮುಸ್ಲಿಂರಿಗೆ ತೊಂದರೆಯಿಲ್ಲ

ಪೌರತ್ವ ಕಾಯ್ದೆ ಜಾರಿ ವಿಚಾರ, ಇದರಿಂದ ಭಾರತದ ಮುಸ್ಲಿಂರಿಗೆ ತೊಂದರೆ ಇಲ್ಲ, ಅವರು ಭಯಪಡುವ ಅವಶ್ಯಕತೆ ಇಲ್ಲ, ಪಾಕಿಸ್ತಾನದ ಮುಸ್ಲಿಂರಿಗೆ ಅವಕಾಶ ಕೊಡಲ್ಲ ರೋಹಿಂಗ್ಯಾಗಳನ್ನು ಒದ್ದು ಹೊರಗೆ ಹಾಕ್ತೀವಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದರು.

For All Latest Updates

ABOUT THE AUTHOR

...view details