ವಿಜಯಪುರ :ಬಸನಗೌಡ ಪಾಟೀಲ್ ಯತ್ನಾಳ ಸ್ವಪಕ್ಷದ ವಿರುದ್ಧವೇ ಸಿಡಿದು ನೆರೆ ಸಂತ್ರಸ್ತರ ಪರ ಬ್ಯಾಟಿಂಗ್ ಮಾಡ್ತಿರೋದು ರಾಜ್ಯದ ಕೆಲವು ನಾಯಕರಿಗೆ ಮುಜುಗರ ಉಂಟು ಮಾಡುತ್ತಿದೆ. ಹೀಗಾಗಿ ಬಿಜೆಪಿ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.
ಕೇಂದ್ರದ ನೋಟಿಸ್ಗೂ ತಲೆಕೆಡಿಸಿಕೊಳ್ಳದ ಬಸನಗೌಡ ಯತ್ನಾಳ್ - ಬಸನಗೌಡ ಯತ್ನಾಳ್
ಗುಮ್ಮಟ ನಗರಿ ವಿಜಯಪುರದ ಬಿಜೆಪಿ ಪಾಳಯದಲ್ಲಿ ಸದ್ಯ ಪರಸ್ಪರ ಪರ ವಿರೋಧ ಹೇಳಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ (ಯತ್ನಾಳ) ಮಾತಿನ ಒರಸೆಯಿಂದ ತಮ್ಮ ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನ ಮೇಲ್ನೋಟಕ್ಕೆ ಸಾಬೀತು ಪಡಿಸುತ್ತಿದ್ದಾರೆ.
![ಕೇಂದ್ರದ ನೋಟಿಸ್ಗೂ ತಲೆಕೆಡಿಸಿಕೊಳ್ಳದ ಬಸನಗೌಡ ಯತ್ನಾಳ್](https://etvbharatimages.akamaized.net/etvbharat/prod-images/768-512-4705030-thumbnail-3x2-chai.jpg)
ಹೌದು, ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಎಂದರೇ ಸಾಕು ಸದಾ ರಾಜ್ಯದಲ್ಲಿ ಒಂದಲ್ಲ ಒಂದು ಸುದ್ದಿಯಲ್ಲಿರುತ್ತಾರೆ. ಉತ್ತರ ಕರ್ನಾಟಕ ನೆರೆ ಪರಿಹಾರ ನೀಡುವ ಕುರಿತಾಗಿ ಸಂತ್ರಸ್ತರ ಪರ ಹೇಳಿಕೆಗಳನ್ನ ನೀಡುತ್ತಲ್ಲೇ ರಾಜ್ಯದ ಕೇಂದ್ರ ಸಚಿವರ ವಿರುದ್ಧ ಗುಡುಗಿದ್ದರು. ಪಕ್ಷದ ವರಿಷ್ಠರಿಗೂ ಮಾತಿನ ಬಿಸಿ ಮುಟ್ಟಿಸಿದ್ರು, ಹೀಗಾಗಿ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಯತ್ನಾಳ್ ಹೇಳಿಕೆಗಳನ್ನು ಸಮರ್ಥಿಸುವಂತೆ 10 ದಿನ ಗಡವು ನೀಡಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಆದರೂ ಕೂಡ ಬಸನಗೌಡ ಯತ್ನಾಳ್ ತಮ್ಮ ಹಳೆಯ ಚಾಳಿ ಮುಂದುವರಿಸಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಬನ್ನಿ ವಿನಿಮಯ ಮಾಡಿಕೊಳ್ಳಲು ಬಂದ ಕ್ಷೇತ್ರದ ಜನತೆಗೆ ಶಾಸಕ ಯತ್ನಾಳ್ ಹಬ್ಬದ ಊಟದ ವ್ಯವಸ್ಥೆ ಮಾಡಿದ್ರು.
ಒಟ್ಟಾರೆ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ವಿಜಯಪುರ ನಗರ ಶಾಸಕನಿಗೆ ಶೋಕಾಸ್ ನೋಟಿಸ್ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇನ್ನು ಯತ್ನಾಳರ ಈ ಹೇಳಿಕೆ ಪಕ್ಷಕ್ಕೆ ಮುಜುಗರ ತರುತ್ತದೆ ಎನ್ನುವುದು ಸ್ವಪಕ್ಷೀಯರ ಅಳಲು. ಅಲ್ಲದೇ ತಮ್ಮ ಜಿಲ್ಲೆಯ ಸಂಸದರ ವಿರುದ್ಧ ಕೂಡ ಯತ್ನಾಳ ಮಾತಿನ ಒರಸೆ ಮುಂದುವರೆಸಿದ್ದಾರೆ. ಅದೇನೇ ಇರಲಿ ಸಂತ್ರಸ್ತರಿಗೆ ನ್ಯಾಯ ಸಿಕ್ಕರೆ ಸಾಕು.