ವಿಜಯಪುರ: ಬಾಬ್ರ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟ ಹಿನ್ನೆಲೆ ಬಿಜೆಪಿಯ ಹಿರಿಯ ಮುಖಂಡರು ನಿರ್ದೋಷಿ ಎಂದು ನ್ಯಾಯಾಲಯ ನೀಡಿದ ತೀರ್ಪಿಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಂತಸ ವ್ಯಕ್ತಪಡಿಸಿದ್ದಾರೆ.
ಬಾಬ್ರಿ ಮಸೀದಿ ಪ್ರಕರಣದ ತೀರ್ಪು: ಬಸನಗೌಡ ಪಾಟೀಲ ಸಂತಸ - ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಂತಸ
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟ ಹಿನ್ನೆಲೆ ಬಿಜೆಪಿಯ ಹಿರಿಯ ಮುಖಂಡರು ನಿರ್ದೋಷಿ ಎಂದು ನ್ಯಾಯಾಲಯ ನೀಡಿದ ತೀರ್ಪಿಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿರುವ ಯತ್ನಾಳ ಇಂದು ಬಾಬರ್ನ ಆಕ್ರಮಣದ ಕುರುಹು ಗುಮ್ಮಟ ಬಿದ್ದ ಬಗ್ಗೆ ನಮ್ಮ ನಾಯಕರ ಮೇಲೆ ಹಾಕಿದ ಪೂರ್ವ ನಿಯೋಜಿತ ಸಂಚು ಕೇಸಿನ ಬಗ್ಗೆ ಸಿ ಬಿ ಐ ಕೋರ್ಟ್ ನಮ್ಮ ಎಲ್ಲ ನಾಯಕರನ್ನು ನಿರ್ದೋಷಿಗಳೆಂದು ಐತಿಹಾಸಿಕ ತೀರ್ಪು ನೀಡಿದೆ. ಈ ನಿರ್ಣಯ ಸಮಸ್ತ ಭಾರತೀಯರ ಗೆಲುವು ಆಗಿದೆ. ಇನ್ನು ನಮಗೆ ಕಾಶಿ ವಿಶ್ವನಾಥ, ಮಥುರಾ ಶ್ರೀ ಕೃಷ್ಣ ಮಂದಿರಗಳು, ಅದರ ಜೊತೆ ಇನ್ನುಳಿದ ಹಿಂದೂ ಪವಿತ್ರ ಸ್ಥಳಗಳ ಮೇಲೆ ಅವಮಾನ ಗುಲಾಮಗಿರಿಯ ಸಂಕೇತ ಮುಕ್ತಿಯಾಗಬೇಕು.
ಜೈ ಶ್ರೀರಾಮ್, ಜೈ ಶ್ರೀ ಕಾಶಿ ವಿಶ್ವನಾಥ, ಜೈ ಶ್ರೀ ಕೃಷ್ಣ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪೋಸ್ಚ್ ಮಾಡಿದ್ದಾರೆ. ಅಲ್ಲದೇ, ಈ ಸಂಬಂಧ ನಾಯಕರಾದ ಎಲ್. ಕೆ. ಅಡ್ವಾಣಿ, ಮುರಳಿ ಮನೋಹರ ಜೋಳಿ, ಕಲ್ಯಾಣ ಸಿಂಗ್, ವಿನಯ ಕಟಿಯಾರ, ಉಮಾ ಭಾರತಿ, ಸಾಕ್ಷಿ ಮಹಾರಾಜ, ಲಲ್ಲೂ ಸಿಂಗ್, ಸಾಧ್ವಿ ರಿತಾಂಬರ, ಮಹಂತ ನಿತ್ಯ ಗೋಪಾಲ ದಾಸ, ಬ್ರಿಜ್ ಭೂಷಣ ಸಿಂಗ್, ದಿ. ಅಶೋಕ ಸಿಂಘಾಲ, ಬಾಳಸಾಹೇಬ ಠಾಕ್ರೆ, ಗಿರಿರಾಜ ಕಿಶೋರ ಅವರ ಫೋಟೋಗಳನ್ನು ಶೇರ್ ಮಾಡಿದ್ದಾರೆ.
TAGGED:
ಬಾಬ್ರಿ ಮಸೀದಿ ಪ್ರಕರಣದ ತೀರ್ಪು