ವಿಜಯಪುರ: ನಾನು ಹಿಂದೆ ಕುಂತು ಆಟ ಆಡೋದಿಲ್ಲ, ಬೆಂಬಲಿಗರನ್ನ ಮುಂದೆ ಬಿಟ್ಟು ಸಚಿವ ಸ್ಥಾನ ಪಡೆಯುವುದಿಲ್ಲ ಎಂದು ಶಾಸಕ ಬಸನಗೌಡ ಯತ್ನಾಳ ಸಚಿವ ಸ್ಥಾನ ಆಕಾಂಕ್ಷೆಗಳಿಗೆ ಟಾಂಗ್ ನೀಡಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ: ಬಸನಗೌಡ ಯತ್ನಾಳ್ ಹೇಳಿಕೆ
ನಾನು ಹಿಂದೆ ಕುಂತು ಆಟ ಆಡೋದಿಲ್ಲ, ಬೆಂಬಲಿಗರನ್ನ ಮುಂದೆ ಬಿಟ್ಟು ಸಚಿವ ಸ್ಥಾನ ಪಡೆಯುವುದಿಲ್ಲ ಎಂದು ಶಾಸಕ ಬಸನಗೌಡ ಯತ್ನಾಳ ಸಚಿವ ಸ್ಥಾನ ಆಕಾಂಕ್ಷೆಗಳಿಗೆ ಟಾಂಗ್ ನೀಡಿದ್ದಾರೆ.
ಉಪ ಚುನಾವಣೆಯಲ್ಲಿ ನಾನು ಅಡ್ಡಾಡಿದ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ, ಸೋಲು ಕಾಣುತ್ತಿದ್ದ ಕ್ಷೇತ್ರದಲ್ಲಿ ಭಾರಿ ಗೆಲವು ಸಿಕ್ಕಿದೆ. ನಾನಾಗಿ ಯಾರಿಗೂ ಮಂತ್ರಿಗಿರಿ ಕೇಳಿಲ್ಲ, ವಾಜಪೇಯಿ ಸರ್ಕಾರದಲ್ಲಿ ನನ್ನನೆ ಕರೆದು ಕೇಂದ್ರ ಮಂತ್ರಿ ಮಾಡಿದ್ರು. ಸಚಿವ ಸ್ಥಾನ ನೀಡಿದ್ರು ಸಮರ್ಥವಾಗಿ ನಿಭಾಯಿಸಲು ಸಿದ್ದ ಎಂದು ಶಾಸಕ ಯತ್ನಾಳ್ ಪರೋಕ್ಷವಾಗಿ ಸಚಿವ ಸ್ಥಾನ ಆಕಾಂಕ್ಷಿ ಎಂದು ಸಾಬೀತು ಪಡಿಸಲು ಪ್ರಯತ್ನಿಸಿದರು.
ಯತ್ನಾಳ ಫಾರ್ ಮಿನಿಸ್ಟರ್ ಅಭಿಯಾನ ವಿಚಾರವಾಗಿ ನನ್ನ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಉತ್ತರ ಕರ್ನಾಟಕ ಅಷ್ಟೇ ಅಲ್ಲ ಇಡೀ ಕರ್ನಾಟಕದಲ್ಲಿ ಹಿಂದುತ್ವದ ಶಕ್ತಿ ನನ್ನ ಬೆನ್ನಿಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಒಬ್ಬ ಮಂತ್ರಿ ಇಂದ ಆಗೋದಿಲ್ಲ. ವಿಜಯಪುರ ಜಿಲ್ಲೆಯ ಸಚಿವ ಸ್ಥಾನಕ್ಕಿಂತ ಉತ್ತರ ಕರ್ನಾಟಕಕ್ಕೆ ಪಾತಿನಿಧ್ಯ ಬೇಕಿದೆ. ಈ ಭಾಗದ ನೀರಾವರಿ, ಅಭಿವೃದ್ಧಿ ಆಗಬೇಕಿದೆ ಎಂದರು.