ವಿಜಯಪುರ: ಬಂಜಾರ ಸಮುದಾಯದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಬಂಜಾರ ಸಮುದಾಯದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕ್ರೈಸ್ತ ಮಿಷನರಿಗಳು ನಮ್ಮ ಸಮುದಾಯದವರನ್ನು ಗುರುತಿಸಿ ಮತಾಂತರ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕ್ರೈಸ್ತ ಮಿಷನರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕ್ರೈಸ್ತ ಮಿಷನರಿಗಳ ವಿರುದ್ಧ ಬಂಜಾರ ಸಮುದಾಯ ಕಿಡಿ
ಬಂಜಾರ ಸಮುದಾಯದ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಬಂಜಾರ ಸಮುದಾಯ ಪ್ರತಿಭಟನೆ ನಡೆಸಿತು. ಕ್ರೈಸ್ತ ಮಿಷನರಿಗಳು ನಮ್ಮ ಸಮುದಾಯದವರನ್ನು ಗುರುತಿಸಿ, ಮತಾಂತರ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಚರ್ಚ್ ಮುಂಭಾಗದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಂಜಾರಾ ಕ್ರಿಸ್‌ಮಸ್ ಎಂಬ ಬ್ಯಾನರ್ಗಳನ್ನು ಹಾಕಿಲಾಗಿದೆ. ಈ ಮೂಲಕ ಕ್ರೈಸ್ತ ಮಿಷನರಿಗಳು ಬಂಜಾರ ಹೆಸರಿನಲ್ಲಿ ಬ್ಯಾಂಕ್ ಖಾತೆ ಮಾಡಿಕೊಂಡು ಕ್ರಿಸ್‌ಮಸ್ ಕಾಣಿಕೆ ಕೂಡ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು.
ರೇವ್ತೇಜ್ ಎಂಬ ವ್ಯಕ್ತಿ ಸಮುದಾಯದ ಹೆಸರಿನಲ್ಲಿ ಬಂಜಾರ ಕ್ರಿಸ್‌ಮಸ್ ಮಾಡಲು ಹಣ ಕೇಳುತ್ತಿದ್ದಾರೆ. ಹಾಗೂ ಕಾನೂನು ಬಾಹಿರವಾಗಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಂಜಾರ ಸಮುದಾಯದ ಹೆಸರು ಬಳಸಿ ಮಿಷನರಿಗಳು ಮತಾಂತರಕ್ಕೆ ಪ್ರೇರಣೆ ನೀಡುವುದನ್ನು ತಕ್ಷಣವೇ ತಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಸಮುದಾಯದ ಮುಖಂಡ ಡಾ. ಬಾಬು ರಾಜ್ ತಿಳಿಸಿದರು.