ವಿಜಯಪುರ: ಕಸದ ವಿಲೇವಾರಿ ವಾಹನಗಳಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸಲು ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಹಾಕಿಕೊಂಡು ಕಸ ಸ್ವೀಕರಿಸ್ತಾರೆ. ಈ ರೀತಿಯ ಎರಡು ಹಾಡುಗಳನ್ನು ಟ್ರೋಲ್ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಭಾರೀ ಟ್ರೋಲ್ ಆಗಿದೆ ಬಾಜಿರಾವ್ ಮಸ್ತಾನಿ ಸಿನಿಮಾ ಹಾಡು..... ಯಾಕೆ ಗೊತ್ತಾ...? - ಎ ಇರಾದಾ ಕರಲಿಯಾ ಹಮನೇ
ಕಸದ ವಿಲೇವಾರಿ ವಾಹನಗಳಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸಲು ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಹಾಕಿಕೊಂಡು ಕಸ ಸ್ವೀಕರಿಸ್ತಾರೆ.ಈ ರೀತಿಯ ಎರಡು ಹಾಡುಗಳನ್ನು ಟ್ರೋಲ್ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
![ಭಾರೀ ಟ್ರೋಲ್ ಆಗಿದೆ ಬಾಜಿರಾವ್ ಮಸ್ತಾನಿ ಸಿನಿಮಾ ಹಾಡು..... ಯಾಕೆ ಗೊತ್ತಾ...?](https://etvbharatimages.akamaized.net/etvbharat/prod-images/768-512-4543604-thumbnail-3x2-sunu.jpg)
ಈಗ ಟ್ರೋಲ್ ಯುಗ .. ಏನೇ ವಿಷಯ ಸಿಕ್ಕರೂ ಸಾಕು ಟ್ರೋಲ್ ಮಾಡಿಬಿಡ್ತಾರೆ. ಸ್ವಚ್ಛ ಭಾರತದ ಹಾಡು "ಸ್ವಚ್ಚ ಭಾರತ ಕಾ ಇರಾದಾ, ಎ ಇರಾದಾ ಕರಲಿಯಾ ಹಮನೇ" ಎಂಬ ಹಾಡು ಹಾಗೂ " ಗಾಡಿವಾಲಾ ಆಯಾ ಕಚಡಾ ಘರ್ ಸೇ ನಿಕಾಲ್" ಎಂಬ ಹಾಡುಗಳನ್ನು ಹಿಂದಿಯ ಪ್ರಸಿದ್ಧ ಚಲನಚಿತ್ರ ಬಾಜಿರಾವ್ ಮಸ್ತಾನಿ ಚಿತ್ರದ ನೃತ್ಯಗಳಿಗೆ ಹೊಂದಿಸಿ ಟ್ರೋಲ್ ಮಾಡಿದ್ದು ಈಗ ವೈರಲ್ ಆಗಿದೆ.
ಈ ಹಿಂದೆ ಇದೆ ಹಾಡನ್ನು ಭಾರತೀಯ ಕ್ರಿಕಿಟ್ ಪಂದ್ಯಾವಳಿ ದೃಶ್ಯಕ್ಕೆ ಅಳವಡಿಸಲಾಗಿತ್ತು. ಅದ್ರಂತೆ ಹಾಲಿವುಡ್ ಪಾಪ್ ಸಿಂಗರ್ ಶಕೀರಾ ವಕಾ ಹಾಡಿಗೂ ಹೊಂದಿಸಿ ಟ್ರೋಲ್ ಮಾಡಲಾಗಿತ್ತು. ಇದೇ ಹಾಡನ್ನು ಹಾಕಿ ಗುಮ್ಮಟನಗರಿ ವಿಜಯಪುರ ಗಣೇಶೋತ್ಸವ ದಲ್ಲಿ ಡಿಜೆಯೊಬ್ಬ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ. ಸದ್ಯ ವಿಜಯಪುರ ವಾಟ್ಸಪ್ ಗ್ರೂಪ್ ಗಳಲ್ಲಿ ಬೆಳಿಗ್ಗೆ ಎದ್ದು ಈ ಟ್ರೋಲ್ ಹಾಡುಗಳನ್ನು ಹಾಕಿ ಗುಡ್ ಮಾರ್ನಿಂಗ್ ಅಥವಾ ಶುಭೋದಯ ಎನ್ನೋ ಟ್ರೆಂಡ್ ಪ್ರಾರಂಭವಾಗಿದೆ.