ಕರ್ನಾಟಕ

karnataka

ETV Bharat / state

ಭೀಮಾತೀರದ ನಟೋರಿಯಸ್ ಚಡಚಡಣ ಸಹೋದರನ ಹತ್ಯೆ ಆರೋಪಿಗಳಿಗೆ ಜಾಮೀನು - undefined

ಕಳೆದ 2017 ರ ಅಕ್ಟೋಬರ್ 30ರಂದು ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ನಕಲಿ ಎನ್​​ಕೌಂಟರ್ ನಡೆದಿತ್ತು. ಅದೇ ದಿನ ಧರ್ಮನ ಸಹೋದರ ಗಂಗಾಧರನನ್ನ ಪೊಲೀಸರು ಮಹಾದೇವ ಬೈರಗೊಂಡ ಗ್ಯಾಂಗಿಗೆ ನೀಡಿದ ಆರೋಪವಿತ್ತು.

ಚಡಚಡಣ ಸಹೋದರನ ಹತ್ಯೆ ಆರೋಪಿಗಳಿಗೆ ಜಾಮೀನು

By

Published : Apr 25, 2019, 5:41 PM IST

ವಿಜಯಪುರ: ಭೀಮಾತೀರದ ನಟೋರಿಯಸ್ ಹಂತಕ ಚಡಚಡಣ ಸಹೋದರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಹಾದೇವ ಬೈರಗೊಂಡ ಸೇರಿ ಮೂವರಿಗೆ ಜಾಮೀನು ಮಂಜೂರು ಮಾಡಲಾಗಿದೆ.

ಕಲಬುರ್ಗಿ ಹೈಕೋರ್ಟ್ ನಲ್ಲಿ ಶರತ್ತು ಬದ್ದ ಜಾಮೀನು ನೀಡಲಾಗಿದೆ. ಜಾಮೀನು ನೀಡಿದ ನ್ಯಾಯಾಧೀಶ ಕೆ ಸೋಮಶೇಖರ್. ಆರೋಪಿ ಪರ ಸಿ ವಿ ನಾಗೇಶ ವಕಾಲತ್ತು ವಹಿಸಿದ್ದರು.ಕಳೆದ 2017 ರ ಅಕ್ಟೋಬರ್ 30ರಂದು ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ನಕಲಿ ಎನ್​​ಕೌಂಟರ್ ನಡೆದಿತ್ತು. ಅದೇ ದಿನ ಧರ್ಮನ ಸಹೋದರ ಗಂಗಾಧರನನ್ನ ಪೊಲೀಸರು ಮಹಾದೇವ ಬೈರಗೊಂಡ ಗ್ಯಾಂಗಿಗೆ ನೀಡಿದ ಆರೋಪವಿತ್ತು.

ಈ ಹಿನ್ನಲೆ ಧರ್ಮ‌ನ ತಾಯಿ ಗಂಗಾಧರ ಹುಡುಕಿಕೊಡುವಂತೆ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಹಾಕಿದ್ದರು. ನಂತ್ರ ಚಡಚಣ ಸಹೋದರರಧರ್ಮರಾಜ ಸಹೋದರ ಗಂಗಾಧರ ಸಹ ಕೊಲೆಯಾಗಿರುವದು ಬೆಳಕಿಗೆ ಬಂದಿತ್ತು. ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ್ ಬೈರಗೊಂಡ, ಆತನ ಸಹಚರರಾದ ಸಿದ್ದಗೊಂಡ ಮುಡವೆ, ಶಿವಾನಂದ ಬಿರಾದಾರ್ ಅವರಿಗೆ ಜಾಮೀನು ಮಂಜೂರಾಗಿದೆ.

For All Latest Updates

TAGGED:

ABOUT THE AUTHOR

...view details