ಕರ್ನಾಟಕ

karnataka

ETV Bharat / state

ಭಾರೀ ಮಳೆಗೆ ಹಾರಿ ಹೋದ ಛಾವಣಿ: ಜೋಳಿಗೆಯಲ್ಲಿದ್ದ ಮಗು ಸಾವು! - vijaypur latest update news

ಮನೆಯ ಛಾವಣಿ ಹಾರಿ ಹೋದ ಪರಿಣಾಮ ಜೋಳಿಗೆಯಲ್ಲಿ ಮಲಗಿದ್ದ ಪುಟ್ಟ ಮಗು ಸಾವನ್ನಪ್ಪಿದೆ.

vijaypur
ಜೋಳಿಗೆಯಲ್ಲಿದ್ದ ಮಗು ಸಾವು

By

Published : Apr 28, 2021, 9:24 AM IST

ವಿಜಯಪುರ:ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆಯ ಛಾವಣಿ ಹಾರಿ ಹೋದ ಪರಿಣಾಮ ಜೋಳಿಗೆಯಲ್ಲಿ ಮಲಗಿದ್ದ ಪುಟ್ಟ ಮಗು ಸಾವನ್ನಪ್ಪಿದ ದಾರುಣ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಭಾರೀ ಮಳೆಗೆ ಹಾರಿ ಹೋದ ಛಾವಣಿ

ಅಬ್ದುಲ್ ರೆಹೆಮಾನ್ ಎಂಬುವರ 8 ತಿಂಗಳ ಮಗು ಸಾವನ್ನಪ್ಪಿದೆ. ಬಿರುಗಾಳಿಯ ರಭಸಕ್ಕೆ ಛಾವಣಿ ಹಾರಿ ಹೋಗಿದೆ. ಪರಿಣಾಮ ಛಾವಣಿಯ ಕಂಬಕ್ಕೆ ಕಟ್ಟಿದ್ದ ಜೋಳಿಯಲ್ಲಿದ್ದ ಮಗು ವಿದ್ಯುತ್ ಕಂಬಕ್ಕೆ ಸಿಲುಕಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ಸಿಡಿಲು ಬಡಿದು ಮಹಿಳೆ ಸಾವು:

ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆಯೋರ್ವಳು ಸಾವನ್ನಪ್ಪಿದ್ದಾಳೆ. ಮಹಾದೇವಿ ನಿಂಬರಗಿ (50) ಮೃತಪಟ್ಟ ಮಹಿಳೆ. ಹೊಲದ ಕೆಲಸ ಮುಗಿಸಿಕೊಂಡು ಬರುವಾಗ ಗುಡುಗು ಸಹಿತ ಸಿಡಿಲು ಅಬ್ಬರಿಸಿತ್ತು. ಮಳೆಗೆ ಹೆದರಿ ಮರದ ಕೆಳಗೆ ನಿಂತಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗ್ತಿದೆ.

ಇಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಓದಿ:ಆಮ್ಲಜನಕ ಸಿಗದೆ ಜೈಪುರದ ಆಸ್ಪತ್ರೆಯಲ್ಲಿ ನಾಲ್ವರು ಸೋಂಕಿತರು ಸಾವು

ABOUT THE AUTHOR

...view details