ಕರ್ನಾಟಕ

karnataka

ETV Bharat / state

ಸರ್ಕಾರ ಖಾದಿ ಬಟ್ಟೆ ನೌಕರರಿಗೆ ಮಾರುಕಟ್ಟೆ ಕಲ್ಪಿಸಬೇಕು: ಬಾಬುಗೌಡ ಪಾಟೀಲ

ಖಾದಿಯಿಂದ‌ ಬರುವ ವಸ್ತುಗಳನ್ನು 15 ವರ್ಷಗಳಿಂದ ವಿಜಯಪುರದಲ್ಲಿ ನಡೆಸಿಕೊಂಡು‌ ಬಂದಿದ್ದೇವೆ. ಹೀಗಾಗಿ ಖಾದಿ‌ ನೇಕಾರರಿಗೆ 2 ಕೋಟಿ‌ ಆದಾಯ ಬರುವಂತಾಗಿದೆ ಎಂದು ಖಾದಿ ಗ್ರಾಮೋದ್ಯಯ ಸಂಘಟನೆಯ ಅಧ್ಯಕ್ಷ ಬಾಬುಗೌಡ ಪಾಟೀಲ ಹೇಳಿದರು.

KN_VJP_05_Khadi_ustava_AVB_KA10027
ಸರ್ಕಾರ ಖಾದಿ ಬಟ್ಟೆ ನೌಕರರಿಗೆ ಮಾರುಕಟ್ಟೆ ಕಲ್ಪಿಸಬೇಕು: ಬಾಬುಗೌಡ ಪಾಟೀಲ ಆಗ್ರಹ

By

Published : Jan 28, 2020, 8:49 AM IST

ವಿಜಯಪುರ:ಖಾದಿಯಿಂದ‌ ಬರುವ ವಸ್ತುಗಳನ್ನು 15 ವರ್ಷಗಳಿಂದ ವಿಜಯಪುರದಲ್ಲಿ ನಡೆಸಿಕೊಂಡು‌ ಬಂದಿದ್ದೇವೆ. ಹೀಗಾಗಿ ಖಾದಿ‌ ನೇಕಾರರಿಗೆ 2 ಕೋಟಿ‌ ಆದಾಯ ಬರುವಂತಾಗಿದೆ ಎಂದು ಖಾದಿ ಗ್ರಾಮೋದ್ಯಯ ಸಂಘಟನೆಯ ಅಧ್ಯಕ್ಷ ಬಾಬುಗೌಡ ಪಾಟೀಲ ಹೇಳಿದರು.

ಸರ್ಕಾರ ಖಾದಿ ಬಟ್ಟೆ ನೌಕರರಿಗೆ ಮಾರುಕಟ್ಟೆ ಕಲ್ಪಿಸಬೇಕು: ಬಾಬುಗೌಡ ಪಾಟೀಲ
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಏರ್ಪಡಿಸಲಾಗಿರುವ 15 ದಿನ‌‌ ಕಾಲ ನಡೆಯುವ ಖಾದಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಖಾದಿ ಉದ್ಯಮ‌ ಗುಡಿ ಕೈಗಾರಿಕೆ ಆಧಾರಿತವಾಗಿದೆ. ಖಾದಿ ಕೊಳ್ಳುವ ಶಕ್ತಿ ಜನರಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ‌ಇಂದು ಖಾದಿ‌‌‌ ನೇಕಾರರೇ ಮಾರುಕಟ್ಟೆ ಸೃಷ್ಟಿಕೊಳ್ಳುವ ಕಾಲ‌ ಬಂದಿದೆ. ಮೊದಲು ಖಾದಿ ತಯಾರಿಕೆ ಉದ್ಯಮಕ್ಕೆ ಸರ್ಕಾರದ ಯಾವುದೇ ಆರ್ಥಿಕ ನೆರವು ಇಲ್ಲದ ಕಾರಣ ಇಂದಿನ‌ ದಿನ‌ಮಾನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ಪರಿಣಾಮ ಖಾದಿ ಉದ್ಯಮ ಕಣ್ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಸರ್ಕಾರ ಖಾದಿ ಬಟ್ಟೆ ನೇಕಾರರಿಗೆ ಮಾರುಕಟ್ಟೆ ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.

ABOUT THE AUTHOR

...view details