ಕರ್ನಾಟಕ

karnataka

ETV Bharat / state

ನಿಜವಾಯ್ತಾ ಬಬಲಾದಿ ಮಠದ ಕಾಲಜ್ಞಾನ? : ವೈರಲ್​ ಆಯ್ತು ಸದಾಶಿವ ಮುತ್ಯಾ ನುಡಿದ ಭವಿಷ್ಯವಾಣಿ! - Babaladi Muthya Kalagyana news

ಕಳೆದ ಶಿವರಾತ್ರಿ ಜಾತ್ರೆಯ ದಿನ ಕಾಲಜ್ಞಾನ ಬಬಲಾದಿ ಸದಾಶಿವ ಮಠದ ಸಿದ್ದು ಮುತ್ಯಾ ಈ ಭವಿಷ್ಯ ಹೇಳಿದ್ದರು. 2021ರಲ್ಲಿ ಭೂಕಂಪನ ಉಂಟಾಗುತ್ತೆ ಎಂದು ಹೇಳಿದ್ದರು. ಇದೀಗ ತಡರಾತ್ರಿ ಭೂಕಂಪನದ ಅನುಭವ ಉಂಟಾದ ಕಾರಣ ಅವರ ಭವಿಷ್ಯವಾಣಿಯ ವಿಡಿಯೋ ವೈರಲ್ ಆಗಿದೆ..

Babaladi Muthya Kalagyana Video Viral
ಬಬಲಾದಿ ಮಠ

By

Published : Sep 5, 2021, 8:49 PM IST

Updated : Sep 5, 2021, 10:26 PM IST

ವಿಜಯಪುರ :ಜಿಲ್ಲೆಯ ಬಬಲಾದಿ ಮಠ ತನ್ನದೇ ಇತಿಹಾಸ ಸಾರುತ್ತದೆ. ಸದಾಶಿವ ಮುತ್ಯಾನ ದರ್ಶನ ಪಡೆಯಲು ಮಹಾರಾಷ್ಟ್ರ, ಸಾಂಗಲಿ, ಔರಾಬಾದ್ ಹಾಗೂ ರಾಜ್ಯದ ಬಹುತೇಕ ಜಿಲ್ಲೆಯಿಂದ ಆಗಮಿಸುತ್ತಾರೆ.‌

ಪ್ರತಿ ಫೆಬ್ರವರಿ ಶಿವರಾತ್ರಿ ಹುಣ್ಣಿಮೆಗೆ ಲಕ್ಷಾಂತರ ಭಕ್ತರು ಸೇರಿ ಮುತ್ಯಾನ‌ ದರ್ಶನ ಪಡೆಯುತ್ತಾರೆ. ಆದರೆ, ಈ ಮಠದಲ್ಲಿ ಸಾರಾಯಿಯೇ ನೈವೇದ್ಯ. ಇದೇ ಸಾರಾಯಿಯನ್ನು ತೀರ್ಥದ ರೂಪದಲ್ಲಿ ಪಡೆಯುವುದು ವಾಡಿಕೆ. ಮುಖ್ಯವಾಗಿ ಜಾತ್ರೆಯ ಕೊನೆ ದಿನ‌ ಸದಾಶಿವ ಮುತ್ಯಾ ಕಾಲ ಜ್ಞಾನ ಹೇಳುತ್ತಾರೆ ಎಂಬ ನಂಬಿಕೆಯಿದೆ.‌

ವೈರಲ್​ ಆಯ್ತು ಸಿದ್ದು ಮುತ್ಯಾ ನುಡಿದ ಭವಿಷ್ಯವಾಣಿ!

ಅದು ಬಹುತೇಕ ನಿಜವಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. 2012ರ ಶಿವರಾತ್ರಿ ದಿನ ಕಾಲಜ್ಞಾನ ನುಡಿದಂತೆ ಸತ್ಯವಾಗಿದೆ. ನಿನ್ನೆ ಜಿಲ್ಲೆಯಲ್ಲಿ ಭೂಕಂಪದ ಅನುಭವ ಹಿನ್ನೆಲೆ ಬಬಲಾದಿ ಸದಾಶಿವ ಮುತ್ಯಾನ ಮಠದ ಶ್ರೀಗಳ ಕಾಲಜ್ಞಾನ ಹೇಳಿದ ವಿಡಿಯೋ ಈಗ ವೈರಲ್‌ ಆಗಿದೆ.‌

ಕಳೆದ ಶಿವರಾತ್ರಿ ಜಾತ್ರೆಯ ದಿನ ಕಾಲಜ್ಞಾನ ಬಬಲಾದಿ ಸದಾಶಿವ ಮಠದ ಸಿದ್ದು ಮುತ್ಯಾ ಈ ಭವಿಷ್ಯ ಹೇಳಿದ್ದರು. 2021ರಲ್ಲಿ ಭೂಕಂಪನ ಉಂಟಾಗುತ್ತೆ ಎಂದು ಹೇಳಿದ್ದರು. ಇದೀಗ ತಡರಾತ್ರಿ ಭೂಕಂಪನದ ಅನುಭವ ಉಂಟಾದ ಕಾರಣ ಅವರ ಭವಿಷ್ಯವಾಣಿಯ ವಿಡಿಯೋ ವೈರಲ್ ಆಗಿದೆ.

ಓದಿ: ವಿಜಯಪುರ ಜಿಲ್ಲೆಯಲ್ಲಿ ಭೂಕಂಪನದ ಅನುಭವ... ಮನೆಯಿಂದ ಹೊರಗೆ ಬಂದ ಜನರು!

Last Updated : Sep 5, 2021, 10:26 PM IST

ABOUT THE AUTHOR

...view details