ಕರ್ನಾಟಕ

karnataka

ETV Bharat / state

ಬಿಎಸ್​ವೈ ಬಗ್ಗೆ ಗೌರವ ಎಂದ ಯತ್ನಾಳ್​ ಹೇಳಿಕೆ: ಪಕ್ಷದ ಬೆಳವಣಿಗೆಗೆ ಪೂರಕ ಎಂದ ಬಿವೈ ವಿಜಯೇಂದ್ರ

ಬಿಎಸ್​ವೈ ಕುರಿತ ಯತ್ನಾಳ್ ಹೇಳಿಕೆ ಪಕ್ಷಕ್ಕೆ ಭವಿಷ್ಯದ ದೃಷ್ಠಿಯಲ್ಲಿ ಒಳ್ಳೆಯ ಬೆಳವಣಿಗೆ - ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ

By

Published : Jan 27, 2023, 5:44 PM IST

ಬಿಎಸ್​ವೈ ಬಗ್ಗೆ ಗೌರವ ಇದೆ ಎಂದ ಯತ್ನಾಳ್ ಹೇಳಿಕೆ ಕುರಿತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಾತನಾಡಿದರು

ವಿಜಯಪುರ :ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಕುರಿತು ನನಗೆ ಅಪಾರ ಗೌರವವಿದೆ. ಹೈಕಮಾಂಡ್ ಸೂಚನೆ ಮೇರೆಗೆ ಬಿಎಸ್​ವೈ ಕುರಿತು ಮಾತನಾಡಲ್ಲ ಎಂದು ನಿನ್ನೆ ಹೇಳಿದ್ದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿಕೆ ಕುರಿತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಪಕ್ಷದ ಹಿತದೃಷ್ಟಿಯಿಂದ, ಪಕ್ಷದ ಭವಿಷ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಎಂದು ಭಾವಿಸಿರುವೆ ಎಂದರು.

ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ‌ ನಡೆದ ಧಾರ್ಮಿಕ‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಯತ್ನಾಳ್​ ಅವರು ಹಿರಿಯರಿದ್ದಾರೆ. ಅವರ ಬಗ್ಗೆ ನಾನು ಹೆಚ್ಚಿಗೆ ಹೇಳಲು ಇಚ್ಚಿಸಲ್ಲ. ಬಿಎಸ್​ವೈ ಅವರು ನಾಲ್ಕು ಬಾರಿ ರಾಜ್ಯದ ಸಿಎಂ ಆಗಿದ್ದವರು. ಬಿಎಸ್​ವೈ ಅವರು ಸಿಎಂ ಇಲ್ಲದಿದ್ದರೂ ಎಲ್ಲಾ ಸಮುದಾಯದ ಜನರು ಒಪ್ಪಿಕೊಂಡಿರುವ ಧೀಮಂತ ನಾಯಕರಾಗಿದ್ದಾರೆ ಎಂದರು.

ಯತ್ನಾಳ್​ ಅವರ ಬಗ್ಗೆ ನಮಗೆ ವೈಯಕ್ತಿಕ ವಿರೋಧಗಳಿಲ್ಲ: ಬಿ ಎಸ್​ ಯಡಿಯೂರಪ್ಪನವರಿಗೆ ಕಲ್ಲನ್ನು ಎಸೆದರೆ ಅದು ಪಕ್ಷಕ್ಕೆ ಹೊಡೆತ ಬೀಳುತ್ತದೆ. ಪಕ್ಷಕ್ಕೆ ಪೆಟ್ಟಾಗುತ್ತದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಬರುವಂತಹ ದಿನಗಳಲ್ಲಿ ಅರ್ಥ ಆಗುತ್ತದೆ ಎಂದು ಭಾವಿಸಿರುವೆ ಎಂದ ವಿಜಯೇಂದ್ರ, ಏನೇ ಸಮಸ್ಯೆ ಇದ್ದರೂ ತಿಳಿದುಕೊಂಡು ಬಗೆಹರಿಸಿ ಕೊಳ್ಳಬೇಕಾಗುತ್ತದೆ. ನಾನಿನ್ನು ರಾಜಕೀಯದಲ್ಲಿ ಅಂಬೆಗಾಲಿಡುತ್ತಿದ್ದೇನೆ. ಯತ್ನಾಳ್​ ಅವರ ಬಗ್ಗೆ ನಮಗೆ ವೈಯಕ್ತಿಕ ವಿರೋಧಗಳಿಲ್ಲ. ನಮ್ಮ ಹೇಳಿಕೆ ಆಲೋಚನೆಗಳು ಪಕ್ಷಕ್ಕೆ ಪೂರಕವಾಗಿರಬೇಕು. ಪಕ್ಷಕ್ಕೆ ಧಕ್ಕೆ ತರುವಂತಿರಬಾರದು. ಚುನಾವಣೆ ಹೊತ್ತಿನಲ್ಲಿರುವ ನಾವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಕೈಯನ್ನು ಇನ್ನಷ್ಟು ಬಲಪಡಿಸಬೇಕೆಂದರೆ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ಕರ್ತವ್ಯ ಇದೆ ಎಂದರು.‌

ಕಾಂಗ್ರೆಸ್ ವಿರುದ್ಧಬಿ ವೈ ವಿಜಯೇಂದ್ರ ವಾಗ್ದಾಳಿ: ದೇಶದಲ್ಲಿ ಪ್ರಜೆಗಳಿಂದ ಧಿಕ್ಕರಿಸಲ್ಪಟ್ಟ ಪಕ್ಷ ಕಾಂಗ್ರೆಸ್. ಇಡೀ ದೇಶದಲ್ಲಿ ಜನರು ಕಾಂಗ್ರೆಸ್​​ ಪಕ್ಷವನ್ನು ದೂರ ಮಾಡಿದ್ದಾರೆ. ರಾಜ್ಯದಲ್ಲಿ ಕೂಡ ಜನರಿಂದ ದೂರವಾಗಿರುವ ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ ಎಂದರು. ಭ್ರಷ್ಟಾಚಾರದ ಕುರಿತು ಬಿಜೆಪಿ ವಿರುದ್ದ ಕಾಂಗ್ರೆಸ್ ಮಾಡುತ್ತಿರೋ ಆರೋಪ ಹಾಸ್ಯಾಸ್ಪದವಾಗಿದೆ.‌ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ. ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್​ನದ್ದು ಅವಿನಾಭಾವ ಸಂಬಂಧ. ಭ್ರಷ್ಟಾಚಾರದ ಕುರಿತು ಮಾತನಾಡುವ ಯೋಗ್ಯತೆಯನ್ನು ಕಾಂಗ್ರೆಸ್​ನವರು ಉಳಿಸಿಕೊಂಡಿಲ್ಲ ಎಂದರು.

ಇದನ್ನೂ ಓದಿ :ಯಾರೋ ಬಾರ್​ನಲ್ಲಿ ಹೊಡೆದಾಟ ಮಾಡಿಕೊಂಡಿದ್ದಕ್ಕೆ ರಾಜಕೀಯ ಬಣ್ಣ ಕೊಟ್ಟರೆ ಹೇಗೆ?: ಗೃಹ ಸಚಿವ ಆರಗ ಜ್ಞಾನೇಂದ್ರ

ಕಾಂಗ್ರೆಸ್​ನಲ್ಲಿ ಡಿಕೆಶಿ ವರ್ಸಸ್ ಸಿದ್ದರಾಮಯ್ಯ ಎಂಬಂತಾಗಿದೆ. ನಿನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಕೆಶಿಗೆ ಅವಮಾನಿಸುವ ಕೆಲಸ ಮಾಡಲಾಗಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡೋಕೆ ಡಿಕೆಶಿ ರಾಜ್ಯಾಧ್ಯಕ್ಷರು ಆಗಬೇಕಾ, ಈ ಮೂಲಕ ಡಿಕೆಶಿ ಬಗ್ಗೆ ಮೃದು ಧೋರಣೆ ತೋರಿದ ವಿಜಯೇಂದ್ರ, ದಿನದಿಂದ ದಿನಕ್ಕೆ ಕಾಂಗ್ರೆಸ್​ನ ಪಕ್ಷದಲ್ಲಿರೋ ಗೊಂದಲಗಳು ಹೆಚ್ಚಾಗುತ್ತಿವೆ. ಅದು ಜನರಿಗೆ ಶೀಘ್ರವೇ ಗೊತ್ತಾಗಲಿದೆ ಎಂದು ಹೇಳಿದರು.

’ಹೈಕಮಾಂಡ್ ಹೇಳಿದರೆ ಕಣಕ್ಕೆ’: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೊನೆ ಗಳಿಗೆಯಲ್ಲಿ ವರುಣಾದಿಂದ ಹಿಂದೆ ಸರಿಯಬೇಕಾಯಿತು. ಈ ಬಾರಿ ಹೈ ಕಮಾಂಡ್​ ಸೂಚಿಸಿದರೆ ಎಲ್ಲಿಯಾದರೂ ನಿಲ್ಲುವುದಾಗಿ ತಮ್ಮ ಚುನಾವಣೆ‌ ಕಣಕ್ಕೆ ನಿಲ್ಲುವ ಇಂಗಿತ ವ್ಯಕ್ತಪಡಿಸಿದರು.‌

ಇದನ್ನೂ ಓದಿ :ಶಾದಿ ಭಾಗ್ಯ ಮಾಡಿದ್ದರಿಂದಲೇ ಸಿದ್ದರಾಮಯ್ಯಗೆ ದೌರ್ಭಾಗ್ಯ ಬಂತು: ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ

ABOUT THE AUTHOR

...view details