ವಿಜಯಪುರ:ಮುಂದಿನ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುತ್ತದೆ. ವಿಧಾನಸಭೆ ಚುನಾವಣೆಯಲ್ಲಿ 140 - 150 ಸೀಟು ಗೆಲ್ಲುವ ವಿಶ್ವಾಸವಿದೆ. ನನ್ನ ಆರೋಗ್ಯ ಚೆನ್ನಾಗಿದೆ, ವಯಸ್ಸು ಇರುವವರಿಗೆ ಪಕ್ಷಕ್ಕೆ ದುಡಿಯುವೆ, ಇನ್ನೂ ಕನಿಷ್ಠ 10ವರ್ಷದವರೆಗೆ ಪಕ್ಷಕ್ಕೆ ದುಡಿಯುತ್ತೇನೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿಜಯಪುರದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ವಿಜಯೇಂದ್ರ ಭವಿಷ್ಯದ ನಾಯಕ:ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶದಂತೆ ಒಂದು ಕುಟುಂಬಕ್ಕೆ ಒಂದು ಹುದ್ದೆ ಇರುವ ಕಾರಣ ಸದ್ಯ ಚುನಾವಣೆಗೆ ನಿಲ್ಲುತ್ತಿಲ್ಲ. ಸದ್ಯ ಪಕ್ಷ ಸಂಘಟನೆ ಮಾಡುಲು ಸೂಚಿಸಲಾಗಿದೆ. ವಿಜಯೇಂದ್ರಮುಂದಿನ ಸಿಎಂ ಎನ್ನುವ ಪಕ್ಷದ ಕಾರ್ಯಕರ್ತರ ಅನಿಸಿಕೆಯಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಬಿಎಸ್ ವೈ, ವಿಜಯೇಂದ್ರ ಭವಿಷ್ಯ ನಾಯಕನಾಗುವ ಎಲ್ಲ ಲಕ್ಷಣ ಹೊಂದಿದ್ದಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದು ವಿರುದ್ಧ ಗರಂ: ರಾಜ್ಯಸಭೆ ಚುನಾವಣೆಯಲ್ಲಿ ಮತ್ತೊಂದು ಸ್ಥಾನ ವಿಚಾರವಾಗಿ ಬಿಜೆಪಿ ಆತ್ಮಸಾಕ್ಷಿ ಅಸ್ತ್ರ ಪ್ರಯೋಗಿಸುತ್ತಿದೆ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ, ಇಲ್ಲಿ ಆತ್ಮಸಾಕ್ಷಿ ಬರುವುದಿಲ್ಲ. ಸಿದ್ದರಾಮಯ್ಯ ರಾಜಕೀಯ ಡೊಂಬರಾಟ ಮಾಡುತ್ತಾ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವುದು ನೂರಕ್ಕೆ ನೂರು ಸತ್ಯ ಎಂದರು.