ವಿಜಯಪುರ: ನಗರದ ರಸ್ತೆಗಳ ಮೇಲೆ ಬಣ್ಣದಿಂದ ಬರೆಯುವ ಮೂಲಕ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ.
ವಿಜಯಪುರ ಜಿಲ್ಲಾಡಳಿತದಿಂದ ಕೊರೊನಾ ಕುರಿತು ಜಾಗೃತಿ... ರಸ್ತೆ ಮೇಲೆ ಎಚ್ಚರಿಕೆ ಸಂದೇಶ! - ರಸ್ತೆ ಮೇಲೆ ಮೂಡಿದ ಎಚ್ಚರಿಕೆ ಸಂದೇಶ
ವಿಜಯಪುರ ನಗರದ ಬಡೆ ಕಮಾನ್ ರಸ್ತೆ, ಬಿಎಲ್‌ಡಿ ರಸ್ತೆ ಸೇರಿದಂತೆ ನಗರ ಪ್ರಮುಖ ರಸ್ತೆಗಳ ಮೇಲೆ 'ನೀವು ಮನೆಯಿಂದ ಹೊರ ಬಂದರೆ ನಾವು ನಿಮ್ಮ ಮನೆಗೆ ಬರುತ್ತೇವೆ' ಎಂದು ಬರೆಯುವ ಮೂಲಕ ಜಿಲ್ಲಾಡಳಿತ ಕೊರೊನಾ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ.
ನಗರದ ಬಡೆ ಕಮಾನ್ ರಸ್ತೆ, ಬಿಎಲ್‌ಡಿ ರಸ್ತೆ ಸೇರಿದಂತೆ ನಗರ ಪ್ರಮುಖ ರಸ್ತೆಗಳ ಮೇಲೆ 'ನೀವು ಮನೆಯಿಂದ ಹೊರ ಬಂದರೆ ನಾವು ನಿಮ್ಮ ಮನೆಗೆ ಬರುತ್ತೇವೆ' ಎಂದು ಬರೆಯುವ ಮೂಲಕ ಜಿಲ್ಲಾಡಳಿತ ಕೊರೊನಾ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ.
ದೇಶದಲ್ಲಿ 21 ದಿನಗಳ ಕಾಲ ಲಾಕ್ಡೌನ್ ಜಾರಿಯಲ್ಲಿದ್ದರೂ ನಗರದ ಜನತೆ ಕುಂಟು ನೆಪ ಹೇಳಿ ಬೀದಿಗಳಲ್ಲಿ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ನಗರದ ಜನತೆಗೆ ರಸ್ತೆ ಮೂಲಕ ಈ ಜಾಗೃತಿ ಕಾರ್ಯಕ್ಕೆ ಮುಂದಾಗಿದ್ದು, ರಸ್ತೆಗಳಲ್ಲಿ ಹೋಗುವ ಬೈಕ್ ಸವಾರರು ಎಚ್ಚರಿಕೆ ಸಂದೇಶ ಓದಿ ಮುಂದಕ್ಕೆ ಸಾಗುತ್ತಿದ್ದಾರೆ.