ಕರ್ನಾಟಕ

karnataka

ETV Bharat / state

ಸಿಬಿಎಸ್‌ಇ ಫಲಿತಾಂಶ: ಆಟೋ ಚಾಲಕನ ಮಗಳು ತಾಲೂಕಿಗೆ ದ್ವಿತೀಯ ಸ್ಥಾನ - Vijayapura News

ತಾಲೂಕಿನ ಶಿರೋಳ ಗ್ರಾಮದ ನೇಕಾರ ಕುಟುಂಬದ ಅಟೋ ಚಾಲಕರಾಗಿರುವ ಕಾಶೀನಾಥ ಹೆಬ್ಬಾಳ ಅವರ ಪುತ್ರಿ ತನುಜಾ ಹೆಬ್ಬಾಳ 10ನೇ ತರಗತಿ ಪರೀಕ್ಷೆಯಲ್ಲಿ ತಾಲೂಕಿಗೆ 2ನೇ ಸ್ಥಾನ ಪಡೆದಿದ್ದು, ಪೋಷಕರಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

Auto driver daughter got 2nd rank in 10th CBSC examination
ಸಿಬಿಎಸ್‌ಇ ಫಲಿತಾಂಶ: ಆಟೋ ಚಾಲಕನ ಮಗಳು ತಾಲೂಕಿಗೆ ದ್ವಿತೀಯ ಱಂಕ್​

By

Published : Jul 18, 2020, 11:52 PM IST

ಮುದ್ದೇಬಿಹಾಳ (ವಿಜಯಪುರ): ತಾಲೂಕಿನ ಶಿರೋಳ ಗ್ರಾಮದ ಅಟೋ ಚಾಲಕ ಕಾಶೀನಾಥ ಹೆಬ್ಬಾಳ ಅವರ ಪುತ್ರಿ ತನುಜಾ ಹೆಬ್ಬಾಳ ಸಿಬಿಎಸ್‌ಇ 10ನೇ ತರಗತಿಯಲ್ಲಿ ಶೇ.92.5ರಷ್ಟು ಫಲಿತಾಂಶ ದಾಖಲಿಸಿ ಕೀರ್ತಿ ತಂದಿದ್ದಾಳೆ.

ವೃತ್ತಿಯಲ್ಲಿ ಅಟೋ ಚಾಲಕನಾಗಿದ್ದರೂ ತನ್ನ ಪುತ್ರಿಯರು ಉನ್ನತ ವ್ಯಾಸಂಗ ಮಾಡಲಿ ಎಂದು ಹಗಲಿರುಳು ಶ್ರಮವಹಿಸಿ ದುಡಿಯುತ್ತಿರುವ ಆಟೋ ಚಾಲಕ ಇದೀಗ ಪುತ್ರಿಯ ಸಾಧನೆ ಕಂಡು ಸಂತಸಗೊಂಡಿದ್ದಾರೆ.

ಸಿಬಿಎಸ್‌ಇ ಫಲಿತಾಂಶ: ಆಟೋ ಚಾಲಕನ ಮಗಳು ತಾಲೂಕಿಗೆ ದ್ವಿತೀಯ ಱಂಕ್​

ತಾಲೂಕಿನ ಶಿರೋಳ ಗ್ರಾಮದ ನೇಕಾರ ಕುಟುಂಬದ ಅಟೋ ಚಾಲಕರಾಗಿರುವ ಕಾಶೀನಾಥ ಹೆಬ್ಬಾಳ ಅವರ ಪುತ್ರಿ ತನುಜಾ ಹೆಬ್ಬಾಳ 10ನೇ ತರಗತಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್​​​ ಪಡೆದಿದ್ದು, ಇಡೀ ಊರಿಗೆ ಕೀರ್ತಿ ತಂದಿದ್ದಾಳೆ.

ಪಟ್ಟಣದ ಬಿ.ಎಸ್. ಸೆಂಟ್ರಲ್ ಶಾಲೆಯಲ್ಲಿ ಓದುತ್ತಿರುವ ತನುಜಾ ಈ ಮೂಲಕ ತಾಲೂಕಿಗೆ 2ನೇ ಸ್ಥಾನ ಪಡೆದುಕೊಂಡಿದ್ದಾಳೆ. ತನುಜಾ ಇಂಗ್ಲಿಷ್ ಭಾಷೆಯಲ್ಲಿ 89, ಹಿಂದಿಯಲ್ಲಿ 93, ಗಣಿತದಲ್ಲಿ 91, ವಿಜ್ಞಾನದಲ್ಲಿ 88, ಸಮಾಜ ವಿಜ್ಞಾನದಲ್ಲಿ 99 ಹಾಗೂ ಕನ್ನಡದಲ್ಲಿ 95 ಅಂಕ ಗಳಿಸಿದ್ದಾಳೆ.

ABOUT THE AUTHOR

...view details