ವಿಜಯಪುರ:ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಬಸವನಬಾಗೇವಾಡಿ ತಾಲೂಕಿನ ಪಿಡಿಒ ಮೇಲೆ ಹಲ್ಲೆ ನಡೆಸಿದವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಪಿಡಿಒ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆಗ್ರಹ - ಆರೋಪಿಗಳಿಗೆ ಕ್ರಿಮಿನಲ್ ಮೊಕದ್ದಮೆ ಹಾಕುವಂತೆ ಪ್ರತಿಭಟನೆ
ಸ್ಥಳ ಪರಿಶೀಲನೆಗಾಗಿ ಬಿಇಒ ಹಾಗೂ ಪಿಡಿಒ ಕುಬಕಡ್ಡಿ ಗ್ರಾಮಕ್ಕೆ ಹೋದಾಗ ಕೆಲವರು ಪಿಡಿಒ ಗಜಂಡಿಮಠ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಬೇಕೆಂದು ಒತ್ತಾಯಿಸಿ ಜಿಪಂ ಸಿಇಒಗೆ ಮನವಿ ಸಲ್ಲಿಸಲಾಯಿತು.
ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಕೆಲವರು ನೈರ್ಮಲಿಕರಣಕ್ಕಾಗಿ ಮತ್ತು ರಸ್ತೆ ರಿಪೇರಿಗಾಗಿ ಗ್ರಾಮಸ್ಥರು ಸಲ್ಲಿಸಿದ್ದ ಅರ್ಜಿ ವಿಚಾರಣೆಗಾಗಿ ಕೊಲ್ಹಾರ ಬಿಇಒ ಆದೇಶದಂತೆ ಪಿಡಿಒ ಗಜಂಡಿಮಠ ಗ್ರಾಮಸ್ಥರನ್ನು ಕರೆಯಿಸಿದ್ದರು.
ಅದರಂತೆ ಅರ್ಜಿ ವಿಚಾರಿಸಿ ಸ್ಥಳ ಪರಿಶೀಲನೆಗಾಗಿ ಬಿಇಒ ಹಾಗೂ ಪಿಡಿಒ ಕುಬಕಡ್ಡಿ ಗ್ರಾಮಕ್ಕೆ ಹೋದಾಗ ಕೆಲವರು ಬಿಇಒ ಕಾರು ಅಡ್ಡಗಟ್ಟಿ ಸಮಸ್ಯೆ ಹೇಳುತ್ತಿದ್ದಾಗ, ಪಿಡಿಒ ಗಜಂಡಿಮಠ ಅದರ ವಿವರಣೆ ನೀಡುತ್ತಿದ್ದಾಗ ಸುತ್ತುವರೆದಿದ್ದ ಗ್ರಾಮಸ್ಥರಲ್ಲಿ ಕೆಲವರು ಪಿಡಿಒ ಮೇಲೆ ಹಲ್ಲೆ ನಡೆಸಿದ್ದಾರೆ. ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿ ಜಿಪಂ ಸಿಇಒಗೆ ಮನವಿ ಸಲ್ಲಿಸಲಾಯಿತು.