ವಿಜಯಪುರ: ಬೆಂಗಳೂರಿನ ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುವವರು ಮನುಷ್ಯರೇ ಅಲ್ಲ.ಇದೊಂದು ಅಸಹ್ಯ ಹಾಗೂ ಹೇಸಿಗೆ ಕೆಲಸ ಎಂದಿದ್ದಾರೆ.
ನಂತರ ಮಾತು ಮುಂದುವರೆಸಿದ ಅವರು, ಜನರು ಕೂಡ ಇಂತವರನ್ನ ಕ್ಷಮಿಸಬಾರದು. ಕಾನೂನಾತ್ಮಕ ಅತಿ ಕಠಿಣವಾದ ಶಿಕ್ಷೆ ನೀಡಬೇಕು, ಎಲ್ಲದಕ್ಕೂ ಒಂದು ಇತಿ-ಮಿತಿ ಇದೆ, ಇದನ್ನ ಸಹಿಸಿಕೊಳ್ಳಲು ಆಗಲ್ಲ. ಅನಕ್ಷರಸ್ಥ, ಮುಗ್ದ ಜನರಿಗೆ ಅಲ್ಲಿನ ಮುಖಂಡರು, ಕಾರ್ಪೊರೇಟರ್ಗಳು ತಿಳಿ ಹೇಳಬೇಕು ಎಂದು ಸಲಹೆ ನೀಡಿದರು.