ವಿಜಯಪುರ: ಪಾಕಿಸ್ತಾನದ ಪರ ವಾಟ್ಸಪ್ ಪೈಲಾನ್ ಗ್ರೂಪ್ನಲ್ಲಿ ಹಾಕಲಾಗಿದ್ದ ವಿವಾದಾತ್ಮಕ ಪೋಸ್ಟ್ನ್ನು ಪ್ರಶ್ನಿಸಿದ್ದಕ್ಕೆ ಪೈಲ್ವಾನ್ ಒಬ್ಬರನ್ನು ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಆರೋಪ ಪ್ರಕರಣ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಡೆದಿರುವದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಎರಡು ತಿಂಗಳ ಹಿಂದೆ ಪೈಲ್ವಾನ್ ಗ್ರೂಪ್ನಲ್ಲಿ ಪಾಕಿಸ್ತಾನ ಹಸಿರು ಸಿಂಹ ಪೋಸ್ಟ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪೈಲ್ವಾನ್ ಉಮೇಶ ಎಂಬವರನ್ನು 20 ಜನರ ತಂಡ ಅಪಹರಿಸಿ ಮನಸೋಇಚ್ಛೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಎರಡು ತಿಂಗಳ ಹಿಂದೆ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ತುರ್ಕ ಆಸಂಗಿ ಗ್ರಾಮದ ಅಪ್ಜಲ್ ಖಾನ್ ಮುಜಾವರ ಎಂಬ ಪೈಲ್ವಾನ್ ಹಸಿರು ಸಿಂಹದ ಫೋಟೋ ಪೋಸ್ಟ್ ಮಾಡಿದ್ದರು ಎನ್ನಲಾಗ್ತಿದೆ.