ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಕಾಲೋನಿಯ ಹೇಮರಡ್ಡಿ ಮಲ್ಲಮ್ಮ ವೃತ್ತದ ಬಳಿಯ ಮದರಿ ಕಾಂಪ್ಲೆಕ್ಸ್‌ನಲ್ಲಿರುವ ಪರಿವರ್ತಿತ ಯೂನಿಯನ್ ಬ್ಯಾಂಕ್ ಎಟಿಎಂ ದರೋಡೆ (Union Bank ATM robbery) ಪ್ರಕರಣ ಶನಿವಾರ ಸಂಜೆ ಬೆಳಕಿಗೆ ಬಂದಿದೆ.
ಎಟಿಎಂನಲ್ಲಿ ನ.17ರಂದು 21 ಲಕ್ಷ ರೂ. ನಗದು ಹಾಕಲಾಗಿತ್ತು. ನ.18ರ ಸಂಜೆಯವರೆಗೆ ಗ್ರಾಹಕರು 4-5 ಲಕ್ಷ ನಗದು ಡ್ರಾ ಮಾಡಿಕೊಂಡಿದ್ದಾರೆ. ನ.19ರ ಬೆಳಿಗ್ಗೆ ನೋಡಿದಾಗ ಎಟಿಎಂನಲ್ಲಿ ಇರಬೇಕಿದ್ದ 16.08 ಲಕ್ಷ ನಗದು ಹಣ ನಾಪತ್ತೆಯಾಗಿದೆ. ಈ ಸಂಗತಿಯನ್ನು ಕೂಡಲೇ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಸ್ಥಳೀಯ ಠಾಣೆಯ ಪಿಎಸ್ಐ ಗಮನಕ್ಕೆ ತಂದಿದ್ದಾರೆ. ಸಂಜೆ ಬಸವನ ಬಾಗೇವಾಡಿ ಡಿವೈಎಸ್ಪಿ ಅರುಣಕುಮಾರ ಕೋಳೂರ, ಮುದ್ದೇಬಿಹಾಳ ಪೊಲೀಸ್ ವೃತ್ತದ ಸಿಪಿಐ ಆನಂದ ವಾಘ್ಮೋಡೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿದ್ದ ಎಲ್ಲ ಸಿಸಿ ಫೂಟೇಜ್ ಪರಿಶೀಲಿಸಿದ್ದಾರೆ. ಇದ್ರ ಜೊತೆಗೆ, ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.