ವಿಜಯಪುರ: ಆಸ್ತಿ ವಿಚಾರವಾಗಿ ಮಹಿಳೆಯೊಬ್ಬಳ ಮೇಲೆ ನಡುರಸ್ತೆಯಲ್ಲೇ ಅಮಾನವೀಯವಾಗಿ ಹಲ್ಲೆ ಮಾಡಿ ಮಾಡಿದ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಜಲಪುರದಲ್ಲಿ ನಡೆದಿದೆ. ಮಹಾದೇವಿ ಫಿರಾಪೂರ ಹಲ್ಲೆಗೊಳಗಾದವರೆಂದು ತಿಳಿದುಬಂದಿದೆ.
ನಡುರಸ್ತೆಯಲ್ಲೇ ಮಹಿಳೆ ಮೇಲೆ ಅಮಾನುಷ ಹಲ್ಲೆ ಪ್ರಕರಣದ ವಿವರ:ಮಹಾದೇವಿ ಹೊಲದಲ್ಲಿ ಒಬ್ಬಳೇ ಇದ್ದಾಗ ಆನಂದ್ ಬಿರಾದಾರ ಎಂಬಾತ ಕೈ ಹಿಡಿದು ಎಳೆದಾಡಿದ್ದಾನೆ. ಬಳಿಕ ಆತನಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾಳೆ. ಜಮೀನಿನಿಂದ ಮನೆಗೆ ಬರುವಾಗ ಮಹಿಳೆಯನ್ನು ತಡೆದು ಆನಂದ್ ಬಿರಾದಾರ, ಶ್ರೀ ಶೈಲ ಬಿರಾದಾರ, ನಾನಾಗೌಡ ಬಿರಾದಾರ ಎಂಬುವರು ಸೇರಿ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಮಹಿಳೆ ಮೇಲೆ ಹಲ್ಲೆಗೈದ ಆರೋಪಿಗಳು.. ಮಹಾದೇವಿ ಗಂಡನ ಮನೆ ಸುರಪೂರ ತಾಲೂಕಿನ ವಂದಗನೂರ ಗ್ರಾಮ. ಜಲಪುರ ಗ್ರಾಮದಲ್ಲಿ ಇವರಿಗೆ 1 ಎಕರೆ ಜಮೀನಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಜಮೀನಿನ ಮೇಲೆ ಹಲ್ಲೆಕೋರರು ಕಣ್ಣಿಟ್ಟಿದ್ದರು ಎನ್ನಲಾಗಿದೆ. ಶ್ರೀಶೈಲ ಬಿರಾದಾರ ಮತ್ತು ಮಹಾದೇವಿ ಸಂಬಂಧಿಗಳು. ಮಹಾದೇವಿ ಗಂಡನ ಮನೆ ತೊರೆದು ಸದ್ಯ ತವರುಮನೆ ಜಲಪುರದಲ್ಲಿ ನೆಲೆಸಿದ್ದಾಳೆ. ಹೀಗಾಗಿ ಆಸ್ತಿ ವಿಚಾರವಾಗಿ ಮಹಾದೇವಿ ಮೇಲೆ ಮೂವರು ಸಂಬಂಧಿಕರು ಸೇರಿ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಿರುಕುಳ ಪ್ರಕರಣ.. ಜೊಮ್ಯಾಟೊ ಡೆಲಿವರಿ ಹುಡುಗನ ಬಂಧಿಸಿದ ಪೊಲೀಸರು