ವಿಜಯಪುರ :ಕ್ಷುಲ್ಲಕ ಕಾರಣಕ್ಕೆ ಬಸ್ ಕಂಡಕ್ಟರ್ ಮೇಲೆ ಕೆಲ ಯುವಕರು ಹಲ್ಲೆ ನಡೆಸಿರುವ ಘಟನೆ ಇಂಡಿ ತಾಲೂಕಿನ ರೂಡಗಿ ಗ್ರಾಮದ ಬಳಿ ನಡೆದಿದೆ.
ಬಾಗಿಲು ಬಿಟ್ಟು ಮೇಲೆ ಬನ್ನಿ ಎಂದಿದ್ದಕ್ಕೆ ಸರ್ಕಾರಿ ಬಸ್ ನಿರ್ವಾಹಕನ ಮೇಲೆ ಹಲ್ಲೆ - ನಿರ್ವಾಹಕನ ಮೇಲೆ ಹಲ್ಲೆ
ಹಲ್ಲೆಗೊಳಗಾದ ಕಂಡಕ್ಟರ್ ಶಾಮರಾಯ್ ಅವರನ್ನು ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆಗೈದಿರುವ ಯುವಕರು ಪರಾರಿಯಾಗಿದ್ದಾರೆ..
ನಿರ್ವಾಹಕನ ಮೇಲೆ ಹಲ್ಲೆ
ಬಸ್ ನಿರ್ವಾಹಕ ಶಾಮರಾಯ ತಳಕೇರಿ ಹಲ್ಲೆಗೊಳಗಾದವರು. ಬಾಗಿಲಿಗೆ ನಿಂತಿರುವ ಯುವಕರಿಗೆ ಒಳಗೆ ಹೋಗಲು ಹೇಳಿದಕ್ಕೆ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ನಿರ್ವಾಹಕ ಆರೋಪಿಸಿದ್ದಾರೆ.
ಹಲ್ಲೆಗೊಳಗಾದ ಕಂಡಕ್ಟರ್ ಶಾಮರಾಯ್ ಅವರನ್ನು ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆಗೈದಿರುವ ಯುವಕರು ಪರಾರಿಯಾಗಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.