ವಿಜಯಪುರ: ಬಸವನಾಡಿನಲ್ಲಿ ಇನ್ನೂ ಮೇಲು-ಕೀಳು ಎನ್ನುವ ಜಾತಿ ಭೇದ ಭಾವ ಹೋಗಿಲ್ಲ ಎನ್ನುವುದಕ್ಕೆ ಮತ್ತೊಮ್ಮೆ ಒಂದು ಜಾತಿಯ ಯುವಕನ ಮೇಲೆ ಬೇರೊಬ್ಬ ಜಾತಿಯ ಕೆಲವರು ಹಲ್ಲೆ ನಡೆಸಿರುವುದು ಜೀವಂತ ಸಾಕ್ಷಿಯಾಗಿದೆ.
ಬೈಕ್ ಮುಟ್ಟಿದ್ದಕ್ಕೆ ಯುವಕನ ಮೇಲೆ ಹಲ್ಲೆ ವಾಹನ ಮುಟ್ಟಿದ್ದಕ್ಕೆ ಅಪಚಾರವಾಗಿದೆ (ಮೈಲಿಗೆ ಆಗಿದೆ) ಎಂದು ಆರೋಪಿಸಿ ಯುವಕನೊಬ್ಬನ ಮೇಲೆ ಕೆಲವರು ಸಾಮೂಹಿಕವಾಗಿ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಿಣಜಗಿ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ನಿಂತಿದ್ದ ವಾಹನವನ್ನು ಯುವಕ ಕಾಶಿನಾಥ ಯಂಕಪ್ಪ ತಳವಾರ ಮೇಲೆ ಗ್ರಾಮದ ಕೆಲ ಜನ ಕೂಡಿಕೊಂಡು ಹಲ್ಲೆ ಮಾಡಿದ್ದಾರೆ.
ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ 13 ಜನರ ಮೇಲೆ ಪ್ರಕರಣ ದಾಖಲಾಗಿದೆ ಇನ್ನು ಅದೇ ಮಾರ್ಗವಾಗಿ ಹೋಗುತ್ತಿದ್ದ ಮುದ್ದೇಬಿಹಾಳ ಸಿಪಿಆಯ್ ಅವರನ್ನು ನೋಡಿದ ತಕ್ಷಣ ಎಲ್ಲರೂ ಓಡಿ ಹೋಗಿದ್ದು, ನಂತರ ಪೊಲೀಸರು ಹಲ್ಲೆಗೊಳಗಾದ ಯುವಕನನ್ನು ಮುದ್ದೇಬಿಹಾಳ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಮುಟ್ಟಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ 13 ಜನರ ಮೇಲೆ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಯುವಕನ ತಂದೆ ಯಂಕಪ್ಪ ಅವರು 13 ಜನರ ಜೊತೆ ಇದರಲ್ಲಿ 20-25 ಜನ ಇದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಿಣಜಗಿ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಈ ಘಟನೆ ನಡೆದಿದೆ.
ತನಿಖಾಧಿಕಾರಿ ಡಿವೈಎಸ್ಪಿ ಶಾಂತವೀರ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ಧಿ ಅವರು ಭಾನುವಾರ ಗ್ರಾಮದಲ್ಲಿ ಎರಡೂ ಸಮುದಾಯದವರ ಶಾಂತಿಸಭೆ ನಡೆಸಿದ್ದು, ತನಿಖೆ ಮುಂದುವರೆದಿದೆ. ಶಾಂತಿ ಸಭೆಯಲ್ಲಿ ಪಿಎಸ್ಐ ಶಿವಾಜಿ ಪವಾರ, ಸಿಪಿಐ ಆನಂದ ವಾಗ್ಮೋಡೆ ಇತರರು ಇದ್ದರು.