ವಿಜಯಪುರ:ಮನೆಯ ಮುಂದಿನ ಚರಂಡಿ ನಿರ್ಮಾಣ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕುಟುಂಬವೊಂದರ ಮೇಲೆ ಪುರಸಭೆ ಸದಸ್ಯ ಹಾಗೂ ಆತನ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಜಾಲಹಳ್ಳಿ ತಾಂಡಾದಲ್ಲಿ ಗಲಾಟೆ ನಡೆದಿದ್ದು, ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಬಸವನಬಾಗೇವಾಡಿ ಪುರಸಭೆ ಸದಸ್ಯ ನೀಲಪ್ಪ ನಾಯಕ ಎಂಬವರು ಗ್ರಾಮದಲ್ಲಿ ಚರಂಡಿ ನಿರ್ಮಿಸಲು ಮುಂದಾಗಿದ್ದರು. ಈ ವೇಳೆ, ತಮ್ಮ ನಿವೇಶನ ಜಾಗದಲ್ಲಿ ಚರಂಡಿ ನಿರ್ಮಿಸಬೇಡಿ ಎಂದು ಮಂಜುನಾಥ ಲಮಾಣಿ ಹಾಗೂ ಅವರ ಕುಟುಂಬ ಆಕ್ಷೇಪ ವ್ಯಕ್ತಪಡಿಸಿತ್ತು.