ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿಗೆ ಆಶಾ ಕಾರ್ಯಕರ್ತೆ ಬಲಿ - ವಿಜಯಪುರ

ಕೋವಿಡ್​ ಸೋಂಕಿನಿಂದ ಇಲ್ಲಿನ ಚಾಂದಕವಟೆ ಗ್ರಾಮದ ಆಶಾ ಕಾರ್ಯಕರ್ತೆಯೊಬ್ಬರು ಸಾವನ್ನಪ್ಪಿದ್ದಾರೆ.

vijayapur
ಆಶಾ ಕಾರ್ಯಕರ್ತೆ ಜಗದೇವಿ ಹಿಪ್ಪರಗಿ

By

Published : May 31, 2021, 8:30 AM IST

ವಿಜಯಪುರ: ಮಹಾಮಾರಿ ಕೊರೊನಾಗೆ ಆಶಾ ಕಾರ್ಯಕರ್ತೆಯೊಬ್ಬರು ಬಲಿಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಆಲಮೇಲ ತಾಲೂಕಿನ ಚಾಂದಕವಟೆ ಗ್ರಾಮದ ಜಗದೇವಿ ಹಿಪ್ಪರಗಿ (29) ಮೃತರು. ಇವರು ಸಿಂದಗಿ ತಾಲೂಕಿನ ಬಳಗಾನೂರು ಗ್ರಾಮದ ಪ್ರಾಥಮಿಕ‌ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಇವರಿಗೆ ಕೆಲವು ದಿನಗಳಿಂದ ಜ್ವರ, ಕೆಮ್ಮು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ವೇಳೆ ಕೋವಿಡ್ ಸೋಂಕು ದೃಢಪಟ್ಟಿದೆ. ಆದ್ರೀಗ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ABOUT THE AUTHOR

...view details