ವಿಜಯಪುರ: ಮುದ್ದೇಬಿಹಾಳದಲ್ಲಿ ಜೆಡಿಎಸ್ ಟಿಕೆಟ್ ಕೇಳಿದ್ದ ಎ.ಎಸ್.ಪಾಟೀಲ್ ನಡಹಳ್ಳಿ, ಮರದಿಂದ-ಮರಕ್ಕೆ ಹಾರುವ ಮಂಗನಂತೆ. ಕಾಂಗ್ರೆಸ್‍ಗೆ ಬಂದು ದೇವರಹಿಪ್ಪರಗಿಯಲ್ಲಿ ಎರಡು ಬಾರಿ ಚುನಾಯಿತರಾಗಿ, ನಂತರ ಜೆಡಿಎಸ್‍ಗೆ ಸೇರಿ ಅಲ್ಲಿ ತಮ್ಮ ಪತ್ನಿಗೆ ಟಿಕೆಟ್ ಕೇಳಿ ಸಿಗದಿದ್ದಾಗ, ಇದೀಗ ಬಿಜೆಪಿಗೆ ಸೇರಿ, ಸರಾಯಿ ಕುಡಿದ ಮಂಗನಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ರೈತರ ಸೊಸೈಟಿ ಸಾಲವನ್ನು ನಾನೇ ತುಂಬುತ್ತೇನೆ. ಬೃಹತ್ ಗಾರ್ಮೆಂಟ್ ಉದ್ದಿಮೆ ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗ ಕೊಡುತ್ತೇನೆ ಎಂದು ಜನರಿಗೆ ಮಂಕುಬೂದಿ ಎರಚಿದ್ದಾರೆ. ಚುನಾಯಿತರಾದ ನಂತರ ಆ ಕ್ಷೇತ್ರದಿಂದ ಫಲಾಯನಗೈದಿದ್ದಾರೆ.
ಶೇ.50 ಬುದ್ಧಿವಂತ, ಶೇ.50 ಹುಚ್ಚ ಸೇರಿದರೆ ಒಬ್ಬ ಎ.ಎಸ್.ಪಾಟೀಲ್ ನಡಹಳ್ಳಿ ಆಗುತ್ತಾನೆ ಎಂಬುದಕ್ಕೆ ಅವರು ವಿಜಯಪುರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಿದ ಅಂಶಗಳೇ ಸಾಕ್ಷಿ ಎಂದರು.