ವಿಜಯಪುರ:ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಹಾಲಿ ಶಾಸಕ ಎಂ.ಸಿ.ಮನಗೂಳಿರವರ ಪ್ರತಿಮೆಗೆ ಕಳೆದ ವರ್ಷ ನವೆಂಬರ್ನಲ್ಲಿ ಬೆಂಕಿ ಹಚ್ಚಿದ ಪ್ರಕರಣದ ವಿಚಾರವಾಗಿ ಒಂದು ವರ್ಷ ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚದ ಹಿನ್ನೆಲೆ, ಮನಗೂಳಿ ಬೆಂಬಲಿಗರು ಧರಣಿ ನಡೆಸಿದ್ದಾರೆ.
ಪುತ್ಥಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಬಂಧಿಸಿ: ಮನಗೂಳಿ ಬೆಂಬಲಿಗರಿಂದ ಆಗ್ರಹ - ಧಾನಿ ಎಚ್.ಡಿ.ದೇವೆಗೌಡ ಮತ್ತು ಹಾಲಿ ಶಾಸಕ ಎಂ.ಸಿ.ಮನಗೂಳಿ ರವರ ಪ್ರತಿಮೆ
ಕಳೆದ ವರ್ಷ ಸಿಂದಗಿಯಲ್ಲಿ ನಿರ್ಮಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಹಾಲಿ ಶಾಸಕ ಎಂ.ಸಿ. ಮನಗೂಳಿರವರ ಪ್ರತಿಮೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಘಟನೆ ನಡೆದು ಒಂದು ವರ್ಷವಾದರೂ ಆರೋಪಿಗಳನ್ನು ಬಂಧಿಸದ ಕಾರಣ ಮನಗೂಳಿ ಬೆಂಬಲಿಗರು ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದ್ದಾರೆ.
ಮನಗೂಳಿ ಬೆಂಬಲಿಗರಿಂದ ಧರಣಿ ಸತ್ಯಾಗ್ರಹ
ಒಂದು ವರ್ಷದ ಹಿಂದೆ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡಿದ್ದಕ್ಕೆ ಸಿಂದಗಿ ರೈತರಿಂದ ಸ್ನೇಹದ ಸಂಕೇತವಾಗಿ ನಿರ್ಮಿಸಿದ ಪುತ್ಥಳಿಗೆ ದುರ್ಷ್ಕಮಿಗಳು ಬೆಂಕಿ ಹಚ್ಚಿದ್ದರು. ಘಟನೆ ನಡೆದು ಒಂದು ವರ್ಷ ಕಳೆದರೂ ಇನ್ನೂ ಆರೋಪಿಗಳನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ
ಬೆಂಕಿ ಹಚ್ಚಿದ ದುರ್ಷ್ಕಮಿಗಳ ಬಂಧನವಾಗುವವರೆಗೂ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.