ವಿಜಯಪುರ:ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಹೊಂದಿದ್ದ ಇಬ್ಬರನ್ನು ಬಂಧಿಸಿರುವ ನಗರ ಪೊಲೀಸರು ಅವರಿಂದ 3 ಪಿಸ್ತೂಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಜಯಪುರ: ಅಕ್ರಮ ಕಂಟ್ರಿ ಪಿಸ್ತೂಲ್ ಹೊಂದಿದ್ದ ಇಬ್ಬರ ಬಂಧನ - ಕಂಟ್ರಿ ಪಿಸ್ತೂಲ್
ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಬಳಸುತ್ತಿದ್ದ ಇಬ್ಬರನ್ನು ವಿಜಯಪುರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅವರಿಂದ 77ಸಾವಿರ ರೂ. ಮೌಲ್ಯದ ಆಯುಧಗಳನ್ನು ವಶ ಪಡಿಸಿಕೊಳ್ಳಲಾಗಿದೆ.
![ವಿಜಯಪುರ: ಅಕ್ರಮ ಕಂಟ್ರಿ ಪಿಸ್ತೂಲ್ ಹೊಂದಿದ್ದ ಇಬ್ಬರ ಬಂಧನ ಕಂಟ್ರಿ ಪಿಸ್ತೂಲ್](https://etvbharatimages.akamaized.net/etvbharat/prod-images/768-512-6399890-thumbnail-3x2-ggbvv.jpg)
ಕಂಟ್ರಿ ಪಿಸ್ತೂಲ್
ಅಕ್ರಮ ಕಂಟ್ರಿ ಪಿಸ್ತೂಲ್ ಹೊಂದಿದ್ದ ಇಬ್ಬರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ
ಬಂಧಿತ ಆರೋಪಿಗಳನ್ನು ಸುಧೀರ ಕಾಮಣ್ಣ ಕ್ಷತ್ರಿ ಹಾಗೂ ಬಬಲೇಶ್ವರದ ಹನಮಂತ ಯಲ್ಲಪ್ಪ ಹಳ್ಳಿ ಎಂದು ಗುರುತಿಸಲಾಗಿದೆ. ಬಂಧಿತರಿಂದ 3 ಕಂಟ್ರಿ ಪಿಸ್ತೂಲ್, 10 ಜೀವಂತ ಗುಂಡುಗಳು, 6 ವಿವಿಧ ರೀತಿಯ ಆಯುಧಗಳು ಸೇರಿ 77 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನೂ ಮೂವರು ಪರಾರಿಯಾಗಿದ್ದು ಅವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.