ವಿಜಯಪುರ: ಭೀಮಾತೀರದ ನಟೋರಿಯಸ್ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾದೇವ ಸಾಹುಕಾರ ಮೇಲಿನ ಗುಂಡಿನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ - ಭೀಮಾತೀರದ ನಟೋರಿಯಸ್ ಮಹಾದೇವ ಸಾಹುಕಾರ ಭೈರಗೊಂಡ
ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ನಾಗಪ್ಪ ಪೀರಗೊಂಡ ಹಾಗೂ ವಿಜಯಾ ತಾಳಿಕೋಟೆ ಎಂದು ಗುರುತಿಸಲಾಗಿದೆ. ಟಿಪ್ಪರ ಹಾಯಿಸಿ ಮಹಾದೇವ ಸಾಹುಕಾರ ಭೈರಗೊಂಡ ಕಾರು ನಿಲ್ಲಿಸಿದ್ದ ನಾಗಪ್ಪ. ಆಮೇಲೆ 10-15 ಯುವಕರ ತಂಡ ಮಹಾದೇವ ಸಾಹುಕಾರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಅವರ ಅಂಗರಕ್ಷಕ ಹಾಗೂ ಕಾರು ಚಾಲಕ ಸಾವಿಗೀಡಾಗಿದ್ದಾರೆ.
ಇನ್ನು ಮಹಾದೇವ ಸಾಹುಕಾರ ಭೈರಗೊಂಡ ಸ್ಥಿತಿ ಚಿಂತಾಜನಕವಾಗಿದೆ. 2019ರ ಅಕ್ಟೋಬರ್ 30ರಂದು ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ನನ್ನು ಎನ್ಕೌಂಟರ್ ಮೂಲಕ ಹತ್ಯೆ ಮಾಡಲಾಗಿತ್ತು. ಆತನ ಸಹೋದರ ಗಂಗಾಧರ ಚಡಚಣ ಸಹ ಕೊಲೆಯಾಗಿದ್ದನು. ಇದೇ ದ್ವೇಷ ಹಿನ್ನೆಲೆಯಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನ.2ರಂದು ಗುಂಡಿನ ದಾಳಿ ನಡೆಸಲಾಗಿತ್ತು. ಬಂಧಿತ ಆರೋಪಿಗಳು ಸಹ ಧರ್ಮರಾಜ ಚಡಚಣ ಬೆಂಬಲಿಗರು ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಮಾಹಿತಿ ನೀಡಿದ್ದಾರೆ.