ಕರ್ನಾಟಕ

karnataka

ETV Bharat / state

ವ್ಯಕ್ತಿ ಕೊಲೆ ಮಾಡಿ ರಸ್ತೆ ಬದಿ ಎಸೆದುಹೋಗಿದ್ದ ಆರೋಪಿಗಳು ಅರೆಸ್ಟ್​ - Vijayapura Murder case accused arrest news

ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿ ರಸ್ತೆ ಬದಿ ಎಸೆದುಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ.

Arrest
Arrest

By

Published : Jun 22, 2020, 12:45 PM IST

ವಿಜಯಪುರ: ವೈಯಕ್ತಿಕ ದ್ವೇಷಕ್ಕಾಗಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿ ರಸ್ತೆ ಬದಿ ಎಸೆದುಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಅರಕೇರಿ ತಾಂಡ-2 ನಿವಾಸಿಗಳಾದ ಸುರೇಶ ಸೀತು ರಾಠೋಡ್, ಸಂತೋಷ್ ಶ್ಯಾಮು ಪವಾರ, ಸುನೀಲ ಪಾಪು ಪವಾರ, ಅನೀಲ ಬಾಬು ಪವಾರ, ಕ್ಯಾತನಕೇರಿ ತಾಂಡಾ ನಿವಾಸಿ ರವಿ ಅರವಿಂದ ರಾಠೋಡ ಹಾಗೂ ಅರಕೇರಿ ತಾಂಡಾ-6 ನಿವಾಸಿ ಚಂದ್ರಶೇಖರ ವಿಠಲ ರಾಠೋಡ್ ಎಂದು ಗುರುತಿಸಲಾಗಿದೆ.

ಜೂನ್​ 10 ರಂದು ಅರಕೇರಿ ತಾಂಡಾ ನಿವಾಸಿ ಸಂತೋಷ್ ಧರ್ಮು ಜಾಧವ ಎಂಬುವನನ್ನು ಕೊಲೆ ಮಾಡಿ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದರು. ಪ್ರಕರಣದ ಕುರಿತು ತನಿಖೆ ಪ್ರಾರಂಭಿಸಿದ್ದ ಪೊಲೀಸರು ಎಸ್ ಪಿ ಅನುಪಮ ಅಗರವಾಲ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

For All Latest Updates

ABOUT THE AUTHOR

...view details