ವಿಜಯಪುರ: ಹೆದ್ದಾರಿಯಲ್ಲಿ ಲಾರಿ ದರೋಡೆ ಮಾಡಿದ್ದ 9 ಮಂದಿ ಯುವಕರನ್ನು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಐಶಾರಾಮಿ ಜೀವನಕ್ಕಾಗಿ ದರೋಡೆ: ವಿಜಯಪುರ ಪೊಲೀಸರಿಂದ 9 ಮಂದಿ ಯುವಕರ ಬಂಧನ - ವಿಜಯಪುರ ಪೊಲೀಸರಿಂದ 9 ಯುವಕರ ಬಂಧನ
ಐಶಾರಾಮಿ ಜೀವನ ನಡೆಸಲು ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ 9 ಮಂದಿ ಯುವಕರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.
![ಐಶಾರಾಮಿ ಜೀವನಕ್ಕಾಗಿ ದರೋಡೆ: ವಿಜಯಪುರ ಪೊಲೀಸರಿಂದ 9 ಮಂದಿ ಯುವಕರ ಬಂಧನ sdd](https://etvbharatimages.akamaized.net/etvbharat/prod-images/768-512-7363192-thumbnail-3x2-vi.jpg)
ಸಂಗಮೇಶ ಅಗಸರ್, ಬಸವರಾಜ್ ಮಡಿವಾಳಕರ, ಬಸವರಾಜ್ ಮೇಟಿ, ಶಿವಾನಂದ ಕುಂಟಿ, ರವಿ ಬಿರಾದರ್, ಭೀಮರಾಯಿ, ಶೇಕಪ್ಪ ಮಡಿವಾಳ, ಬಸವರಾಜ ಬಿರಾದಾರ ಹಾಗೂ ಒಬ್ಬ ಬಾಲಾಪರಾಧಿ ಸೇರಿ 9 ಜನ ಪೊಲೀಸರ ಅತಿಥಿಗಳಾಗಿದ್ದಾರೆ. ಇವರು ರಾಷ್ಟ್ರೀಯ ಹೆದ್ದಾರಿ-50ರ ಬಳಿ ಮನಗೂಳಿಯಿಂದ ಹೋಗುವ ಲಾರಿಗಳನ್ನು ಅಡ್ಡಗಟ್ಟಿ ದರೋಡೆ ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದರು. ಮೇ 22ರ ರಾತ್ರಿ ಇಂಡಿಯಿಂದ ದಾವಣಗೆರೆಗೆ ಮಾವಿನ ಹಣ್ಣು ತುಂಬಿಕೊಂಡು ಹೋಗುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ 1.28 ಲಕ್ಷ ಹಣ ಹಾಗೂ ಎರಡು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಹಿನ್ನೆಲೆ ಲಾರಿ ಚಾಲಕ ಮನಗೂಳಿ ಠಾಣೆಯಲ್ಲಿ ನೀಡಿದ ದೂರಿನನ್ವಯ ಯುವಕರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರೆಲ್ಲರೂ ಬಸವನ ಬಾಗೇವಾಡಿ ತಾಲೂಕಿನ ಯುವಕರಾಗಿದ್ದು, 89 ಸಾವಿರ ಹಣ, ಕೃತ್ಯಕ್ಕೆ ಬಳಸಲಾದ ಆಟೋ, ದ್ವಿಚಕ್ರ ವಾಹನ, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.