ಕರ್ನಾಟಕ

karnataka

ETV Bharat / state

ಪಿಎಸ್​ಐ ನೇಮಕಾತಿ: ಮಹಿಳಾ ವಿಭಾಗದಲ್ಲಿ ವಿಜಯಪುರ ಯುವತಿಗೆ ಫಸ್ಟ್ ರ‍್ಯಾಂಕ್

ಪೊಲೀಸ್ ಸಬ್ ಇನ್ಸ್​ಪೆಕ್ಟರ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ರಚನಾ ಹನುಮಂತ ಎಂಬುವರು ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಅರ್ಚನಾ ಹನುಮಂತ
ಅರ್ಚನಾ ಹನುಮಂತ

By

Published : Jan 21, 2022, 1:11 PM IST

Updated : Jan 21, 2022, 1:32 PM IST

ವಿಜಯಪುರ: ಕರ್ನಾಟಕ ಪೊಲೀಸ್ ಇಲಾಖೆ ಇತ್ತೀಚಿಗೆ ನಡೆಸಿದ ಪ್ರೊಬೇಷನರಿ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ಜಿಲ್ಲೆಯ ರಚನಾ ಹನುಮಂತ ಎಂಬುವರು ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿ ತರಬೇತಿಗೆ ಆಯ್ಕೆಯಾಗಿದ್ದಾರೆ.

ಎರಡು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಟ್ಟು 153.25 ಅಂಕ ಗಳಿಸಿ ರಚನಾ ಹನುಮಂತ ಜನರಲ್ ಕೆಟಗೇರಿಯಲ್ಲಿ ಆಯ್ಕೆಯಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಹುದ್ದೆಗೆ ರಾಜ್ಯದ 27 ಮಹಿಳೆಯರು ನೇಮಕಾತಿಯಾಗಿದ್ದಾರೆ.

ಪಿಎಸ್​ಐ ಆಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ

ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ರಚನಾ, ಇದೇ ಮೊದಲ ಬಾರಿ ಪೊಲೀಸ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರು. ಮೊದಲ ಪ್ರಯತ್ನದಲ್ಲೇ ಮಹಿಳಾ ಸಬ್ ಇನ್ಸ್​ಪೆಕ್ಟರ್ ಪರೀಕ್ಷೆ ಪಾಸ್​ ಮಾಡುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಜಾಹಿರಾತು:-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 21, 2022, 1:32 PM IST

ABOUT THE AUTHOR

...view details