ಮುದ್ದೇಬಿಹಾಳ(ವಿಜಯಪುರ):ಪಟ್ಟಣದ ಹಸಿರು ತೋರಣ ಗೆಳೆಯರ ಬಳಗವು ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಅಂದು ಪರಿಸರ ಕ್ಷೇತ್ರದಲ್ಲಿ ದುಡಿದ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಿದೆ.
ಹಸಿರು ತೋರಣ ಬಳಗದಿಂದ 'ಪರಿಸರ ರಕ್ಷಕ' ಪ್ರಶಸ್ತಿಗೆ ಅರ್ಜಿ ಆಹ್ವಾನ - muddebihal news
ಮುದ್ದೇಬಿಹಾಳ ಪಟ್ಟಣದ ಹಸಿರು ತೋರಣ ಗೆಳೆಯರ ಬಳಗವು ಪರಿಸರ ರಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದ್ದು, ಪರಿಸರ ಕ್ಷೇತ್ರದಲ್ಲಿ ಕೆಲಸ ಮಾಡಿರುವ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳ ಬಗ್ಗೆ ಗೊತ್ತಿರುವವರು ಮಾಹಿತಿ ನೀಡುವಂತೆ ತಿಳಿಸಿದೆ.
ಪ್ರಶಸ್ತಿ ನೀಡುವ ಮಾನದಂಡಗಳ ಬಗ್ಗೆ ವಿವರಿಸಿದ ಬಳಗದ ಅಧ್ಯಕ್ಷ ಅಶೋಕ ರೇವಡಿ, ಒಟ್ಟು ನಾಲ್ಕು ಜನರಿಗೆ ಸನ್ಮಾನ ನಡೆಯಲಿದ್ದು, ಅದರಲ್ಲಿ ಇಬ್ಬರು ಅರಣ್ಯ ಇಲಾಖೆಯ ನೌಕರರು ಇರುತ್ತಾರೆ. ಇನ್ನುಳಿದ ಎರಡು ಆಯ್ಕೆಗೆ ತಾಲೂಕಿನಲ್ಲಿ ಪರಿಸರದ ಸಂರಕ್ಷಣೆಗೆ ದುಡಿದ ಸಂಘ-ಸಂಸ್ಥೆಗಳನ್ನ ಗುರುತಿಸಿ ಆಯ್ಕೆ ಮಾಡಲಾಗುವುದು.
ಪರಿಸರ ಕ್ಷೇತ್ರದಲ್ಲಿ ಕೆಲಸ ಮಾಡಿರುವ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳ ಬಗ್ಗೆ ಗೊತ್ತಿರುವವರು ಒಂದು ಬಿಳಿ ಹಾಳೆಯಲ್ಲಿ ಮಾಡಿರುವ ಕೆಲಸವನ್ನ ವಿವರಿಸಿ, ವಾಟ್ಸಾಪ್ ಸಂಖ್ಯೆ 9448553036, 9448442101, 9448646317ಕ್ಕೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಇಲ್ಲವೆ ಹಸಿರು ತೋರಣ ಗೆಳೆಯರ ಬಳಗ (ರಿ) 10ನೇ ಕ್ರಾಸ್ ಹುಡ್ಕೋ ಬಡಾವಣೆ ಮುದ್ದೇಬಿಹಾಳ, ಪಿನ್ ನಂ. 586212ಕ್ಕೆ ಪೋಸ್ಟ್ ಮಾಡಬಹುದು ಎಂದು ತಿಳಿಸಿದ್ದಾರೆ.