ಕರ್ನಾಟಕ

karnataka

ETV Bharat / state

ಮನೆಗಳ ತೆರವು ನಿರ್ಧಾರ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಡಿಸಿಗೆ ಮನವಿ - Buranapura village clearance operation

ವಿಜಯಪುರ ತಾಲೂಕಿನ ಬುರಾಣಪುರ ಗ್ರಾಮದಲ್ಲಿನ ಮನೆ ತೆರವುಗೊಳಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ವೈ‌.ಎಸ್.ಪಾಟೀಲರಿಗೆ ಮನವಿ ಸಲ್ಲಿಸಿದರು.

Appeal to DC for withdrawing house clearance decision
ಮನೆಗಳ ತೆರವು ನಿರ್ಧಾರ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಡಿಸಿಗೆ ಮನವಿ

By

Published : Feb 10, 2020, 6:09 PM IST

Updated : Feb 10, 2020, 6:58 PM IST

ವಿಜಯಪುರ:ತಾಲೂಕಿನ ಬುರಾಣಪುರ ಗ್ರಾಮದಲ್ಲಿನ ಮನೆಗಳನ್ನು ತೆರವುಗೊಳಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ವೈ‌. ಎಸ್.ಪಾಟೀಲರಿಗೆ ಮನವಿ ಸಲ್ಲಿಸಿದರು.

ಮನೆಗಳ ತೆರವು ನಿರ್ಧಾರ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಡಿಸಿಗೆ ಮನವಿ

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾತಾ ಯೋಗೇಶ್ವರಿ, ಜಿಲ್ಲಾ ಪಂಚಾಯತಿ ಸದಸ್ಯ ನವೀನ ಅರಕೇರಿ, ಈಶ್ವರ ಶಿವೂರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ತಮ್ಮ ಗ್ರಾಮದಲ್ಲಿ 30 ವರ್ಷದಿಂದ ಸುಮಾರು 8 ಸಾವಿರ ಜನರು ವಾಸವಿದ್ದೇವೆ. ಸಮಯಕ್ಕೆ ಸರಿಯಾಗಿ ಮನೆ ಕರವನ್ನು ಪಾವತಿಸುತ್ತಿದ್ದೇವೆ. ಮನೆ, ಜಮೀನಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ಈಗ ಏಕಾಏಕಿ ಜಾಗ ಖಾಲಿ ಮಾಡಿ, ಇಲ್ಲವಾದ್ರೆ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ನೋಟಿಸ್ ನೀಡಲಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಇಲ್ಲಿ ವಾಸವಿರುವ ನಾವು ಹೆಚ್ಚಿನವರು ದಿನಗೂಲಿ ಕಾರ್ಮಿಕರಾಗಿದ್ದೇವೆ. ಒಂದು ವೇಳೆ ಮನೆ ತೆರವುಗೊಳಿಸಿದರೆ ನಾವು ನಿರ್ಗತಿಕರಾಗಬೇಕಾಗುತ್ತದೆ. ಹೀಗಾಗಿ ಕೂಡಲೆ ತೆರವುಗೊಳಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು. ಜೊತೆಗೆ, ಜಾಗವನ್ನು ಪರಿಶೀಲಿಸಿ ಮಂಜೂರಾತಿ ಪತ್ರ ನೀಡಬೇಕು ಎಂದು ಮನವಿ ಸಲ್ಲಿಸಿದರು.

Last Updated : Feb 10, 2020, 6:58 PM IST

ABOUT THE AUTHOR

...view details