ವಿಜಯಪುರ:ಅಂಗನವಾಡಿ ಕೇಂದ್ರದಿಂದ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದಲ್ಲಿ ಹುಳಗಳು ಪತ್ತೆಯಾಗಿದ್ದು ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ವಾರ್ಡ್ ನಂ 15ರ ಅಂಗನವಾಡಿ ಮೂಲಕ ಕಳಪೆ ಪುಷ್ಟಿ ಆಹಾರ ವಿತರಣೆಯಲ್ಲಿ ಈ ಅಚಾತುರ್ಯ ಕಂಡು ಬಂದಿದೆ.
ಮನಗೂಳಿ ಪಟ್ಟಣದ ಇಂದ್ರಾನಗರದಲ್ಲಿ ಕಳಪೆ ಆಹಾರ ವಿತರಿಸಿದ್ದು, 6 ತಿಂಗಳಿನಿಂದ 3 ವರ್ಷದ ಒಳಗಿನ ಮಕ್ಕಳಿಗೆ ವಿತರಣೆ ಆಗುವ ಬಹುಧಾನ್ಯ ಪುಡಿ ಮಿಶ್ರಿತ ಪುಷ್ಟಿ ಆಹಾರದಲ್ಲಿ ಹುಳ ಪತ್ತೆಯಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡಲಾಗುವ ಪುಷ್ಟಿ ಆಹಾರ ಪ್ಯಾಕೆಟ್ ಸರಿಯಾಗಿ ಪ್ಯಾಕ್ ಮಾಡಿರಲಿಲ್ಲ. ಪುಷ್ಟಿಯಲ್ಲಿ ಹುಳು ಪತ್ತೆಯಾಗಿರುವ ಕಾರಣ ಪೋಷಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಂಗನವಾಡಿ ಸಿಬ್ಬಂದಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.