ಕರ್ನಾಟಕ

karnataka

ಆಹಾರ ಧಾನ್ಯ ವಿತರಿಸದೇ ಕೊಳೆಯುವಂತೆ ಮಾಡಿದ ಅಂಗನವಾಡಿ ಕಾರ್ಯಕರ್ತೆಯರು

By

Published : Jun 26, 2020, 7:49 AM IST

ಸರಕಾರದಿಂದ ಪೂರೈಕೆಯಾಗಿದ್ದ ಆಹಾರ ಧಾನ್ಯವನ್ನು ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ವಿತರಿಸದೇ, ಕೊಳೆಯುವಂತೆ ಮಾಡಿದ್ದ ಕಾರ್ಯಕರ್ತೆಯರು ಅದನ್ನು ಸುಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾರ್ಯಕರ್ತೆಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಹಾರ ಧಾನ್ಯ ವಿತರಿಸದೇ ಕೊಳೆಯುವಂತೆ ಮಾಡಿದ ಅಂಗನವಾಡಿ ಕಾರ್ಯಕರ್ತರು
ಆಹಾರ ಧಾನ್ಯ ವಿತರಿಸದೇ ಕೊಳೆಯುವಂತೆ ಮಾಡಿದ ಅಂಗನವಾಡಿ ಕಾರ್ಯಕರ್ತರು

ಮುದ್ದೇಬಿಹಾಳ(ವಿಜಯಪುರ):ಸರಕಾರದಿಂದ ಪೂರೈಕೆಯಾಗಿದ್ದ ಆಹಾರ ಧಾನ್ಯವನ್ನು ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ವಿತರಿಸದೇ, ಕೊಳೆಯುವಂತೆ ಮಾಡಿದ್ದ ಕಾರ್ಯಕರ್ತೆಯರು ಅದನ್ನು ಸುಡಲು ಮುಂದಾಗಿದ್ದಾರೆ. ಈ ಘಟನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ತಾಲೂಕಾಧ್ಯಕ್ಷ ಬಾಪುಗೌಡ ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಕೇಳಿದರೆ ತಾವು ಆಹಾರ ದಾಸ್ತಾನು ಸುಡಲು ಹೇಳಿಲ್ಲ ಎನ್ನುತ್ತಿದ್ದಾರೆ. ಮೇಲ್ವಿಚಾರಕರನ್ನು ಕೇಳಿದರೆ ಸಿಡಿಪಿಒ ಅವರೇ ಸುಡುವಂತೆ ಹೇಳಿದ್ದಾರೆ ಎಂದು ತಿಳಿಸುತ್ತಿದ್ದಾರೆ. ಒಟ್ಟಾರೆ ಕಾರ್ಯಕರ್ತೆಯನ್ನು ರಕ್ಷಿಸುವ ಹುನ್ನಾರ ಅಧಿಕಾರಿಗಳಿಂದ ನಡೆದಿದೆ ಎಂದು ಆರೋಪಿಸಿದ್ದಾರೆ.

ಆಹಾರ ಧಾನ್ಯ ವಿತರಿಸದೇ ಕೊಳೆಯುವಂತೆ ಮಾಡಿದ ಅಂಗನವಾಡಿ ಕಾರ್ಯಕರ್ತರು

ತಾಲೂಕಿನ ಲೊಟಗೇರಿ ಅಂಗನವಾಡಿ ಕಾರ್ಯಕರ್ತೆ ಕಳೆದ ಮೂರು ದಿನಗಳ ಹಿಂದೆ ಮಕ್ಕಳಿಗೆ ಕೊಡುವ ಹಾಲಿನ ಪೌಡರ್ ಪ್ಯಾಕೆಟ್ ಕದ್ದೊಯ್ದಿದ್ದಾರೆ. ಈ ವೇಳೆ, ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಬಳಿಕ ಮೇಲಧಿಕಾರಿಗಳು ವಿಚಾರಣೆ ನಡೆಸಲು ಹೋದರೂ ಸಹಕಾರ ನೀಡದೇ ದಾಖಲೆಗಳನ್ನು ತೆಗೆದುಕೊಂಡು ಮನೆಗೆ ಹೋಗಿದ್ದಾರೆ. ಬುಧವಾರ ಸ್ವತಃ ಸಿಡಿಪಿಒ ಸಾವಿತ್ರಿ ಗುಗ್ಗರಿ ಅವರ ಮುಂದೆ ಗ್ರಾಮಸ್ಥರು ಕಾರ್ಯಕರ್ತೆ ವಿರುದ್ಧ ಆರೋಪ ಮಾಡಿದ್ದಾರೆ. ಬಳಿಕ ಸ್ಥಳದಲ್ಲಿಯೇ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ಸದ್ಯ ಅಂಗನವಾಡಿಗಳು ಬಂದ್​ ಆಗಿವೆ. ನಿನ್ನೆಯಷ್ಟೇ ಅಂಗನವಾಡಿಗೆ ಭೇಟಿ ನೀಡಿದ್ದ ಸಿಡಿಪಿಒ ಸಾವಿತ್ರಿ ಗುಗ್ಗರಿ ಗುರುವಾರ ಮೇಲ್ವಿಚಾರಕರನ್ನು ಕರೆದು ಕೊಳೆತು ಹೋಗಿದ್ದ ದಾಸ್ತಾನಿನ ಲೆಕ್ಕಮಾಡಿಕೊಂಡು ಬರಲು ತಿಳಿಸಿದ್ದರು. ಅದರಂತೆ ಮೇಲ್ವಿಚಾರಕಿಯೊಬ್ಬರು ಅಂಗನವಾಡಿಗೆ ಬಂದು ಕೊಳೆತು ಹೋಗಿದ್ದ ಆಹಾರ ಧಾನ್ಯಗಳೆಷ್ಟು ಎಂಬುದನ್ನು ಪಟ್ಟಿ ಮಾಡಿಕೊಂಡಿದ್ದಾರೆ. ಅಲ್ಲದೇ ಕೊಳೆತಿದ್ದ ಆಹಾರ ಧಾನ್ಯವನ್ನು ಚೀಲಗಳ ಸಮೇತ ಅಂಗನವಾಡಿ ಕಟ್ಟಡದ ಅನತಿ ದೂರದಲ್ಲಿಯೇ ಸುಟ್ಟು ಹಾಕಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು ಮತ್ತೆ ಅಂಗನವಾಡಿಯತ್ತ ಧಾವಿಸಿ ಬಂದು ಆಹಾರ ಧಾನ್ಯ ಸುಡುತ್ತಿರುವ ಕಾರಣ ಕೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.

ABOUT THE AUTHOR

...view details