ವಿಜಯಪುರ: ಜಿಲ್ಲೆಯ ಚಡಚಣ ಸಮೀಪದ ಉಮರಜ ಗ್ರಾಮದ ಭೀಮಾ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಭೀಮಾ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ - rotten condition
ಜಿಲ್ಲೆಯ ಚಡಚಣ ಸಮೀಪದ ಉಮರಜ ಗ್ರಾಮದ ಭೀಮಾ ನದಿಯಲ್ಲಿ ಸುಮಾರು 35 ರಿಂದ 40 ವರ್ಷ ವಯೋಮಾನದ ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಪರಿಚಿತ ಮಹಿಳೆಯ ಶವ ಪತ್ತೆ
ಇಲ್ಲಿನ ರೇವಣ ಸಿದ್ದೇಶ್ವರ ದೇವಸ್ಥಾನದ ಬಳಿಯ ಭೀಮಾ ನದಿಯಲ್ಲಿ ಶವ ಪತ್ತೆಯಾಗಿದ್ದು, ಸುಮಾರು 35 ರಿಂದ 40 ವರ್ಷ ವಯೋಮಾನದ ಮಹಿಳೆ ಎಂದು ಗುರುತಿಸಲಾಗಿದೆ.
ಒಂದು ವಾರದ ಹಿಂದೆಯೇ ನದಿಯಲ್ಲಿ ಮಹಿಳೆ ಬಿದ್ದಿರುವ ಶಂಕೆ ಇದೆ. ದುರ್ವಾಸನೆ ಬರುತ್ತಿದ್ದುದ್ದನ್ನು ಕಂಡು ಗ್ರಾಮಸ್ಥರು ಚಡಚಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿ ಶವ ಹೊರತೆಗೆದ ಪೊಲೀಸರು, ಶವ ಕೊಳೆತ ಹಿನ್ನೆಲೆ ಸ್ಥಳದಲ್ಲೇ ಶವ ಪರೀಕ್ಷೆ ನಡೆಸಿ ಹೂತು ಹಾಕಿದ್ದಾರೆ.