ವಿಜಯಪುರ: ಕೊರೊನಾ ರೂಪಾಂತರಿ ಸಂಕಷ್ಟ ಹೆಚ್ಚುತ್ತಿರುವ ನಡುವೆ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಹೊಸ ನಿಯಮಾವಳಿ ಜಾರಿ ಮಾಡಲಾಗಿದೆ. ಹೀಗಾಗಿ ವಿಜಯಪುರದ ಮುಮ್ಮಟ್ಟಿಗುಡ್ಡದ ಅಮೋಘಸಿದ್ದೇಶ್ವರ ಜಾತ್ರೆಯನ್ನ ಸರಳವಾಗಿ ನೆರವೇರಿಸಲು ನಿರ್ಧರಿಸಲಾಗಿದೆ.
ಪ್ರತಿ ವರ್ಷ ಕರ್ನಾಟಕವಲ್ಲದೇ ಮಹಾರಾಷ್ಟ್ರದಿಂದಲೂ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದರು. ಆದರೆ, ಕಳೆದೆರಡು ವರ್ಷದಿಂದ ಜಾತ್ರೆಯನ್ನ ಸರಳವಾಗಿ ನಡೆಸಲಾಗುತ್ತಿದೆ. ಈ ಬಾರಿ ಅದ್ದೂರಿಯಾಗಿ ನೆರವೇರಿಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, ಸರ್ಕಾರದ ನೂತನ ಮಾರ್ಗಸೂಚಿ ಅನ್ವಯದಂತೆ ಸರಳ ಮಹೋತ್ಸವಕ್ಕೆ ಮುಂದಾಗಲಾಗಿದೆ.