ಕರ್ನಾಟಕ

karnataka

ETV Bharat / state

ತುಂಬಿದ ಆಲಮಟ್ಟಿ ಡ್ಯಾಂ: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಕಟ್ಟೆಚ್ಚರ - vijayapura district news

ಕೃಷ್ಣಾ ಜಲಾಯನ ಪ್ರದೇಶದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಕೊಯ್ನಾ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯದ ಒಡಲು ಮತ್ತೆ ತುಂಬಿದ್ದು, ಜಲಾಶಯದ 26 ಗೇಟ್‍ಗಳ ಮೂಲಕ ನಾರಾಯಣಪುರ ಜಲಾಶಯಕ್ಕೆ ನೀರು ಹರಿಬಿಡಲಾಗುತ್ತಿದೆ.

ಆಲಮಟ್ಟಿ ಜಲಾಶಯ

By

Published : Sep 6, 2019, 12:12 PM IST

ವಿಜಯಪುರ:ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಕೃಷ್ಣಾ ಜಲಾಯನ ಪ್ರದೇಶದಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದೆ. ಕೊಯ್ನಾ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯದ ಒಡಲು ಮತ್ತೆ ತುಂಬಿದೆ. ಹೀಗಾಗಿ ಜಲಾಶಯದ 26 ಕ್ರೆಸ್ಟ್‌ ಗೇಟ್‍ಗಳ ಮೂಲಕ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿಬಿಡಲಾಗುತ್ತಿದೆ.

ತುಂಬಿದ ಆಲಮಟ್ಟಿ ಜಲಾಶಯ

ಶುಕ್ರವಾರ ಬೆಳಗ್ಗೆ 1.85 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಈಗಾಗಲೇ ಜಲಾಶಯದ ಒಳ ಹರಿವು 72,182 ಕ್ಯೂಸೆಕ್ ಇದೆ. ಜಲಾಶಯದ ಮಟ್ಟ ಗರಿಷ್ಠ 519.60 ಮೀಟರ್ ಇದ್ದು, 518.77 ಮೀಟರ್ ನೀರು ಸಂಗ್ರಹವಾಗಿದೆ. ಜಲಾಶಯದ ನೀರಿನ ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಕೃಷ್ಣಾ ಜಲಾಯನ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಇಂದು ರಾತ್ರಿ ಮತ್ತೆ ಒಂದು ಲಕ್ಷಕ್ಕಿಂತ ಅಧಿಕ ನೀರು ಹೊರಬಿಡುವ ಸಾಧ್ಯತೆಗಳಿವೆ ಎಂದು ಕೆಬಿಎಜ್ಎನ್ಎಲ್ ಮೂಲಗಳು ತಿಳಿಸಿವೆ. ಮಹಾರಾಷ್ಠ್ರದಲ್ಲಿ ಇನ್ನೂ ನಾಲ್ಕು ದಿನ ಮಳೆ ಮುಂದುವರೆಯಲಿದ್ದು, ಮತ್ತಷ್ಟು ನೀರನ್ನು ಕೃಷ್ಣಾ ನದಿಗೆ ಬಿಡಲಿದ್ದಾರೆ. ನೀರಿನ ಒಳಹರಿವು ಗಮನಿಸಿ ನಾರಾಯಣಪುರ ಜಲಾಶಯಕ್ಕೆ ಮತ್ತಷ್ಟು ನೀರು ಬಿಡುವ ಸಾಧ್ಯತೆಗಳಿವೆ.

ABOUT THE AUTHOR

...view details