ಕರ್ನಾಟಕ

karnataka

ETV Bharat / state

ವಾಟರ್​​ಮನ್​ಗೆ ಮಾನಸಿಕ ಕಿರುಕುಳ ಆರೋಪ: ಪ್ರತಿಭಟನೆ - Protest by Waterman family

ಆತ ವಾಟರ್​​ಮನ್ ಆಗಿ ಕೆಲಸ ಮಾಡುತ್ತಿದ್ದ, ಬರುತ್ತಿದ್ದ ಅಷ್ಟಿಷ್ಟೋ ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದ. ಮೇಲಾಧಿಕಾರಿ ಬೇಜವಾಬ್ದಾರಿಯಿಂದ ಇಂದು ವಾಟರ್​​ಮನ್ ಕಳೆದ ಒಂಬತ್ತು ತಿಂಗಳಿನಿಂದ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ವಾಟರ್​​ಮನ್​ಗೆ ಮಾನಸಿಕ ಕಿರುಕುಳ ಆರೋಪ
ವಾಟರ್​​ಮನ್​ಗೆ ಮಾನಸಿಕ ಕಿರುಕುಳ ಆರೋಪ

By

Published : Sep 10, 2020, 9:22 PM IST

ವಿಜಯಪುರ: ತಾಲೂಕಿನ ಅಲಿಯಾಬಾದ್ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಧನವಾಡಹಟ್ಟಿ ಗ್ರಾಮದಲ್ಲಿ ವಾಟರ್​​ಮನ್ ಆಗಿ ಕೆಲಸ ಮಾಡುತ್ತಿರುವ ಗಣಪತಿ‌ ತರಸೆ ಎಂಬ ಕಾರ್ಮಿಕನಿಗೆ, ಪಿಡಿಓ ಜಯಶ್ರೀ ಪವಾರ ವೇತನ ನೀಡದೆ ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನೂ ಕೆಲಸ ಮಾಡಿದ್ರು ಹಾಜರಿ ಹಾಕುತ್ತಿಲ್ಲ ಎಂದು ಗಣಪತಿ ಆರೋಪ ಮಾಡುತ್ತಿದ್ದಾರೆ. ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ, ಆದ್ರೆ ಹಾಜರಾತಿಯಲ್ಲಿ ಗೈರು ತೋರಿಸಿ ನೋಟಿಸ್ ನೀಡುತ್ತಿದ್ದಾರಂತೆ. ಅಲ್ಲದೇ ವೇತನ ನೀಡಿ ಎಂದು ಕೇಳಿದ್ರೆ ಇಂದು ಬಾ ನಾಳೆ ಬಾ ಎಂದು ಕಳೆದ 9 ತಿಂಗಳಿನಿಂದ ವೇತನ ಕೊಡುತ್ತಿಲ್ಲ ಎಂದು ಗಣಪತಿ ಹಾಗೂ ಆತನ ಕುಟುಂಬಸ್ಥರು ಅಧಿಕಾರಿಯ ನಡೆಗೆ ಬೇಸತ್ತು ವೇತನ ನೀಡಿ‌ ಎಂದು ತಲೆ ಮೇಲೆ‌‌‌ ಕಲ್ಲು ಹೊತ್ತು ಪ್ರತಿಭಟನೆ‌ ಮಾಡುತ್ತಿದ್ದಾರೆ.

ವಾಟರ್​​ಮನ್​ಗೆ ಮಾನಸಿಕ ಕಿರುಕುಳ ಆರೋಪ

ಇನ್ನೂ ಅಲಿಯಾಬಾದ್ ಗ್ರಾಮ ಪಂಚಾಯಿತಿಗೆ ಗಣಪತಿ ತರಸೆ 2007-08ರಲ್ಲಿ ನೇಮಕವಾಗಿದ್ದಾರೆ. 2011 ವರಿಗೂ ಕಾಲ ಕಾಲಕ್ಕೆ ಅಧಿಕಾರಿಗಳು ವೇತನ ನೀಡಿದ್ರಂತೆ. ಬಳಿಕ ಪಿಡಿಓ ಜಯಶ್ರೀ ಪವಾರ ವೇತನ ನೀಡಲು ಹಿಂದೇಟು ಹಾಕುತ್ತಿದ್ದಾರಂತೆ, ಈ ಅಧಿಕಾರಿಯ ದುರಾಡಳಿತಕ್ಕೆ‌ ಗಣಪತಿ ಕಾರ್ಮಿಕ ನ್ಯಾಯಾಲಯದ ಮೋರೆ ಹೋಗಿದ್ರು. ಕೋರ್ಟ್ ಕೂಡ ಅಧಿಕಾರಿಗೆ ಬಾಕಿ ಉಳಿಸಿಕೊಂಡ ವೇತನ ನೀಡುವಂತೆ ಆದೇಶ ಮಾಡಿತ್ತು. ಪಿಡಿಓ ತನ್ನ ಹಳೆ ಚಾಳಿ ಮುಂದುವರಿಸಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.

ಅಲಿಯಾಬಾದ್ ಗ್ರಾಮ ಪಂಚಾಯಿತಿ ಕಾರ್ಮಿಕರ ವೇತನ ನಿಗದಿತ ಸಮಯಕ್ಕೆ ಪಾವತಿ ಮಾಡಿಲಾಗುತ್ತಿದೆ. ಆದ್ರೆ ಗಣಪತಿ ವೇತನ ನೀಡಿಲ್ಲ ಆತನಿಗೆ ನ್ಯಾಯ ಒಗಿಸುವಂತೆ ಸ್ಥಳೀಯರು ಕೂಡ ಒತ್ತಾಯ ಮಾಡುತ್ತಿದ್ದಾರೆ. ಪಿಡಿಓ ವೇತನ ನೀಡುವರಿಗೂ ಧರಣಿ ಮಾಡುತ್ತೇವೆ ಎನ್ನುವ ಮಾತುಗಳ ಸದ್ಯ ಗ್ರಾಮಸ್ಥರು ಹೇಳುತ್ತಿದ್ದಾರೆ.

ABOUT THE AUTHOR

...view details