ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ: ಗ್ರಾ.ಪಂನಲ್ಲಿ ನಕಲಿ ಜಾಬ್​​ಕಾರ್ಡ್ ಸೃಷ್ಟಿಸಿ ಅವ್ಯವಹಾರ ಆರೋಪ - Muddebihal Taluk Panchayat is irrelevant

ಕ್ಷೇತ್ರದ ಶಾಸಕ ಎ ಎಸ್ ಪಾಟೀಲ್‌ ನಡಹಳ್ಳಿ ಅವರು ವಲಸೆ ಬಂದ ಹಾಗೂ ನಿಜವಾಗಿಯೂ ಸಂಕಷ್ಟದಲ್ಲಿರುವವರಿಗೆ ಕೆಲಸ ಕೊಡುವಂತೆ ಸೂಚಿಸಿದ್ದರೂ ಈ ರೀತಿ ನಕಲಿ ಫಲಾನುಭವಿಗಳ ಹೆಸರಿನಲ್ಲಿ ಭೋಗಸ್ ಕಾರ್ಡ್​​ ಮೂಲಕ ಅವ್ಯವಹಾರ ಮಾಡಿರುವ ಗ್ರಾಪಂ ಪಿಡಿಒ ಸಂಗಯ್ಯ ಹಿರೇಮಠ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು..

Allegation of Duplicate Job card scam in Muddebihal
ಮುದ್ದೇಬಿಹಾಳ: ತಾ.ಪಂಯಲ್ಲಿ ನಕಲಿ ಜಾಬ್​​ಕಾರ್ಡ್ ಸೃಷ್ಟಿಸಿ ಅವ್ಯವಹಾರ ಆರೋಪ

By

Published : Jul 14, 2020, 6:18 PM IST

Updated : Jul 14, 2020, 7:50 PM IST

ಮುದ್ದೇಬಿಹಾಳ (ವಿಜಯಪುರ):ಕೂಲಿ ಮಾಡುತ್ತೇವೆ ಎಂದು ಅರ್ಜಿ ಸಲ್ಲಿಸದೇ ಇರುವವರ ಹೆಸರಿನಲ್ಲಿ ಕೆರೆ ಹೂಳು ಎತ್ತಿದ್ದಾರೆ ಎಂದು ನಕಲಿ ಜಾಬ್ ಕಾರ್ಡ್‌ ಸೃಷ್ಟಿಸಿ ಸಾವಿರಾರು ರೂಪಾಯಿ ಹಣವನ್ನು ಪಂಚಾಯತ್‌ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ ಎಂದು ಬಸರಕೋಡ ಗ್ರಾಪಂ ಉಪಾಧ್ಯಕ್ಷ ಸೋಮನಗೌಡ ಮೇಟಿ ಹಾಗೂ ಅಧ್ಯಕ್ಷೆಯ ಪತಿ ಯಮನೂರಿ ಮಾದರ ಆರೋಪಿಸಿದ್ದಾರೆ.

ಪಟ್ಟಣದ ತಾಲೂಕು ಪಂಚಾಯತ್‌ ಕಚೇರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಒಟ್ಟು 40 ಜನ ಕೂಲಿ ಕಾರ್ಮಿಕರಲ್ಲಿ 21 ಜನರು ತಮಗೆ ಕೂಲಿಬೇಕು ಎಂದು ಅರ್ಜಿ ಸಲ್ಲಿಸದೇ ಇದ್ದರೂ ಅವರ ಹೆಸರಿನಲ್ಲಿ ನಕಲಿ ಜಾಬ್​​​​ಕಾರ್ಡ್​​ ಸೃಷ್ಟಿಸಿದ್ದಾರೆ. ಅಲ್ಲದೇ ತುಂಬಗಿ ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿರುವ ಪವಿತ್ರಾ ಕೋರವಾರಮಠ ಎಂಬುವರ ಹೆಸರಿನಲ್ಲಿಯೂ ಜಾಬ್​​​ಕಾರ್ಡ್​​ ಮಾಡಿದ್ದು, ಮುದ್ದೇಬಿಹಾಳದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಅವರ ಖಾತೆಗೆ ಕೂಲಿ ಹಣ ಜಮಾ ಮಾಡಲಾಗಿದೆ ಎಂದು ಆರೋಪಿಸಿದರು.

ಕ್ಷೇತ್ರದ ಶಾಸಕ ಎ ಎಸ್ ಪಾಟೀಲ್‌ ನಡಹಳ್ಳಿ ಅವರು ವಲಸೆ ಬಂದ ಹಾಗೂ ನಿಜವಾಗಿಯೂ ಸಂಕಷ್ಟದಲ್ಲಿರುವವರಿಗೆ ಕೆಲಸ ಕೊಡುವಂತೆ ಸೂಚಿಸಿದ್ದರೂ ಈ ರೀತಿ ನಕಲಿ ಫಲಾನುಭವಿಗಳ ಹೆಸರಿನಲ್ಲಿ ಭೋಗಸ್ ಕಾರ್ಡ್​​ ಮೂಲಕ ಅವ್ಯವಹಾರ ಮಾಡಿರುವ ಗ್ರಾಪಂ ಪಿಡಿಒ ಸಂಗಯ್ಯ ಹಿರೇಮಠ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೇ ನಿಜವಾದ ಕೂಲಿಕಾರ್ಮಿಕರಿಗೆ ಕೂಲಿ ನೀಡದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

Last Updated : Jul 14, 2020, 7:50 PM IST

ABOUT THE AUTHOR

...view details