ಕರ್ನಾಟಕ

karnataka

ETV Bharat / state

ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ರದ್ದುಪಡಿಸಿ.. ರೈತ ಸಂಘರ್ಷ ಸಮನ್ವಯ ಸಮಿತಿ ಆಗ್ರಹ - ವಿಜಯಪುರ ಸುದ್ದಿ

ರೈತರಿಗೆ ಮಾರಕವಾಗದ ವಿದ್ಯುತ್ ಕಾಯ್ದೆ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗಳ ಮೂಲಕ ಕೃಷಿಕರನ್ನ ಹೊಸಕುವ ಕಾರ್ಯಕ್ಕೆ ಬಿಜೆಪಿಗರು ಮುಂದಾಗಿ ಬಂಡವಾಳ ಶಾಹಿ ವರ್ಗಗಳ ಬೆನ್ನಟ್ಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು..

protest in Vijayapur
protest in Vijayapur

By

Published : Sep 21, 2020, 10:27 PM IST

ವಿಜಯಪುರ: ರೈತ ವಿರೋಧಿ ಕಾಯ್ದೆಗಳ ಸುಗ್ರೀವಾಜ್ಞೆ‌ಗಳನ್ನು ರದ್ದು ಪಡೆಸುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರೈತ ವಿರೋಧಿ ನೀತಿಗೆ ಪ್ರತಿಭಟಿಸಿದ ರೈತ ಸಂಘರ್ಷ ಸಮನ್ವಯ ಸಮಿತಿ

ನಗರ‌ದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಜಾರಿಗೊಳಿಸಿ ಕಾರ್ಪೊರೇಟ್ ಕಂಪನಿಗಳನ್ನು ಬೆಳೆಸಲು ಮುಂದಾಗುತ್ತಿವೆ.

ರೈತರಿಗೆ ಮಾರಕವಾಗದ ವಿದ್ಯುತ್ ಕಾಯ್ದೆ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗಳ ಮೂಲಕ ಕೃಷಿಕರನ್ನ ಹೊಸಕುವ ಕಾರ್ಯಕ್ಕೆ ಬಿಜೆಪಿಗರು ಮುಂದಾಗಿ ಬಂಡವಾಳ ಶಾಹಿ ವರ್ಗಗಳ ಬೆನ್ನಟ್ಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಕಾರ್ಪೊರೇಟ್ ಕಂಪನಿಗಳ ಲಾಭಕ್ಕಾಗಿ ರೈತರನ್ನ ತುಳಿತಕ್ಕೆ ಒಳಪಡಿಸುವುದು ಸರಿಯಲ್ಲ. ಸರ್ಕಾರ ಜಾರಿ ಮಾಡುತ್ತಿರುವ ಸುಗ್ರೀವಾಜ್ಞೆ‌ಗಳನ್ನು ತಕ್ಷಣವೇ ರದ್ದು ಪಡೆಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಪ್ರತಿಭಟನಾಕಾರರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details