ಕರ್ನಾಟಕ

karnataka

ETV Bharat / state

ವೇತನ ನೀಡುವಂತೆ ಆಲಮಟ್ಟಿ ಗಾರ್ಡನ್ ನೌಕರರ ಪ್ರತಿಭಟನೆ - The corona virus

ಅಧಿಕಾರಿಗಳು ತಕ್ಷಣವೇ 4 ತಿಂಗಳ ಬಾಕಿ ವೇತನ ಪಾವತಿ ಕಾರ್ಯಕ್ಕೆ ಮುಂದಾಗಬೇಕು. ಡಿ ಗ್ರೂಪ್ ಸಿಬ್ಬಂದಿಗೆ ಸಮವಸ್ತ್ರ, ಅಗತ್ಯ ರಕ್ಷಣಾ ಸಾಮಗ್ರಿ ನೀಡಬೇಕು. ವಿಶ್ರಾಂತಿ ಕೋಣೆ ನಿರ್ಮಾಣ, ವಾರಕ್ಕೊಮ್ಮೆ ರಜೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

Alamutty Garden employees protest over pay
ವೇತನ ನೀಡುವಂತೆ ಆಲಮಟ್ಟಿ ಗಾರ್ಡನ್ ನೌಕಕರ ಪ್ರತಿಭಟನೆ

By

Published : Sep 8, 2020, 2:20 PM IST

ವಿಜಯಪುರ:ಆಲಮಟ್ಟಿ ಗಾರ್ಡನ್ ಡಿ ಗ್ರೂಪ್ ನೌಕರರ ಬಾಕಿ ವೇತನ ಮತ್ತು‌ ಇತರ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಆಲಮಟ್ಟಿ ಕೆಬಿಜೆಎನ್‌ಎಲ್ ಡಿ ಗ್ರೂಪ್ ನೌಕರರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಆಲಮಟ್ಟಿ ಕೆಬಿಜೆಎನ್‌ಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊರೊನಾ ವೈರಸ್ ಹಾವಳಿ ನಡುವೆ ಗ್ರೂಪ್ ಡಿ ನೌಕರರ ವೇತನ ಕಡ್ಡಾಯವಾಗಿ ಪಾವತಿಸಬೇಕು ಎಂದು ಆಗ್ರಹಿಸಿದರು.

ವೇತನ ನೀಡುವಂತೆ ಆಲಮಟ್ಟಿ ಗಾರ್ಡನ್ ನೌಕರರ ಪ್ರತಿಭಟನೆ

ಆಲಮಟ್ಟಿ ಗಾರ್ಡನ್​ ಕಾರ್ಮಿಕರಿಗೆ ವೇತನ ನೀಡದಿರುವುದರಿಂದ ಮನೆ ನಿರ್ವಹಣೆಗೂ ಪರದಾಡುವಂತಾಗಿದೆ. ಅಲ್ಲದೆ ಉದ್ಯೋಗವಿದ್ದರೂ ಸಾಲ ಮಾಡಿ ಜೀವನ ನಡೆಸಬೇಕಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಅಧಿಕಾರಿಗಳು ತಕ್ಷಣವೇ 4 ತಿಂಗಳ ಬಾಕಿ ವೇತನ ಪಾವತಿ ಕಾರ್ಯಕ್ಕೆ ಮುಂದಾಗಬೇಕು. ಡಿ ಗ್ರೂಪ್ ಸಿಬ್ಬಂದಿಗೆ ಸಮವಸ್ತ್ರ, ಅಗತ್ಯ ರಕ್ಷಣಾ ಸಾಮಗ್ರಿ ನೀಡಬೇಕು. ವಿಶ್ರಾಂತಿ ಕೋಣೆ ನಿರ್ಮಾಣ, ವಾರಕ್ಕೊಮ್ಮೆ ರಜೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ABOUT THE AUTHOR

...view details