ಕರ್ನಾಟಕ

karnataka

ETV Bharat / state

ಜೀವನಾಡಿ ಆಲಮಟ್ಟಿ ಜಲಾಶಯ ಭರ್ತಿಗೆ ದಿನಗಣನೆ ಆರಂಭ - Vijayapura Rain

123.081 ಟಿಎಂಸಿ ನೀರು ಸಂಗ್ರಹವಿರುವ ಜಲಾಶಯದಲ್ಲಿ ಬುಧವಾರ ಸಂಜೆ 7 ಗಂಟೆಯವರೆಗೆ 115 ಟಿಎಂಸಿ ನೀರು ಸಂಗ್ರಹವಾಗಿದೆ. ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಲು ದಿನಗಣನೆ ಆರಂಭವಾಗಿದೆ.

Alamatti reservoir reached its highest level soon
ಜೀವನಾಡಿ ಆಲಮಟ್ಟಿ ಜಲಾಶಯ ಭರ್ತಿಗೆ ದಿನಗಣನೆ ಆರಂಭ

By

Published : Aug 12, 2020, 10:37 PM IST

Updated : Aug 13, 2020, 12:18 AM IST

ವಿಜಯಪುರ:ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ.

ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ್ ಶಾಸ್ತ್ರಿ (ಆಲಮಟ್ಟಿ) ಸಾಗರದ ಹೊರ ಹರಿವು ಎರಡು ದಿನಗಳ ನಂತರ ಹೆಚ್ಚಿಸಲಾಗಿದೆ. ಒಳಹರಿವು ನಿರಂತರವಾಗಿ 1ಲಕ್ಷ ಕ್ಯೂಸೆಕ್​​​ನಷ್ಟು ಹೆಚ್ಚಳವಾಗಿದ್ದರೂ ಕಳೆದ ಎರಡು ದಿನ ಕೇವಲ 39,000 ಕ್ಯುಸೆಕ್ ನೀರು ಹೊರಹರಿವು ರೂಪದಲ್ಲಿ ಬಿಡಲಾಗುತ್ತಿತ್ತು. ಬುಧವಾರ ಸಂಜೆ ಜಲಾಶಯದಿಂದ 1,29 ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗಿದೆ.

ಆಲಮಟ್ಟಿ ಜಲಾಶಯ

123.081 ಟಿಎಂಸಿ ನೀರು ಸಂಗ್ರಹವಿರುವ ಜಲಾಶಯದಲ್ಲಿ ಬುಧವಾರ ಸಂಜೆ 7 ಗಂಟೆಯವರೆಗೆ 115 ಟಿಎಂಸಿ ನೀರು ಸಂಗ್ರಹವಾಗಿದೆ. ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಲು ದಿನಗಣನೆ ಆರಂಭವಾಗಿದೆ.

ಬೆಳಗ್ಗೆ 112.294 ಟಿಎಂಸಿ ಸಂಗ್ರಹವಿತ್ತು. 2 ಟಿಎಂಸಿಯಷ್ಟು ಹೆಚ್ಚುವರಿ ಸಂಜೆಯವರೆಗೆ ಸಂಗ್ರಹವಾಗಿದೆ. ಜಲಾಶಯದ ಗರಿಷ್ಟ ನೀರಿನ ಮಟ್ಟ 519.60 ಮೀಟರ್ ಆಗಿದ್ದು, ಇಂದು ಸಂಜೆಯವರೆಗೆ 519.20 ಮೀಟರ್​ ಸಂಗ್ರಹವಾಗಿ, ಇನ್ನೂ ಜಲಾಶಯ ಭರ್ತಿಗೆ ಅರ್ಧ ಮೀಟರ್​ನಷ್ಟು ಬಾಕಿ ಉಳಿದಿದೆ.

Last Updated : Aug 13, 2020, 12:18 AM IST

ABOUT THE AUTHOR

...view details