ವಿಜಯಪುರ:ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಾಗಿದೆ.
ಕಳೆದ ಒಂದು ವಾರದಿಂದ ಒಳಹರಿವು ಗಣನೀಯವಾಗಿ ಏರಿಕೆ ಕಂಡಿದೆ. ಇದೇ ರೀತಿ ಒಳಹರಿವು ಹೆಚ್ಚಳವಾದರೆ ಈ ವರ್ಷ ಶೀಘ್ರ ನದಿ ತುಂಬುವ ಸಾಧ್ಯತೆಗಳಿವೆ.
ಬುಧವಾರ ಸಂಜೆ ವೇಳೆಗೆ 9,910 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಶುಕ್ರವಾರ ಬೆಳಗ್ಗೆಯವರೆಗೆ 42,659 ಕ್ಯೂಸೆಕ್ ಒಳಹರಿವು ಇತ್ತು. ಒಟ್ಟು 5475 ಕ್ಯೂಸೆಕ್ ನೀರು ಹೆಚ್ಚಳವಾಗಿದೆ. ಇದರಿಂದ ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.