ಕರ್ನಾಟಕ

karnataka

ETV Bharat / state

ಬೇಡಿಕೆ ಈಡೇರಿಸುವಂತೆ ಒತ್ತಾಯ: ವಿಜಯಪುರದಲ್ಲಿ ಅಕ್ಷರ ದಾಸೋಹ ನೌಕರರ ಪ್ರತಿಭಟನೆ - ವಿಜಯಪುರದ ಅಕ್ಷರ ದಾಸೋಹ ನೌಕರರು

ವಿಜಯಪುರದಲ್ಲಿ ಸೂಕ್ತವಾದ ವೇತನ‌ ಭದ್ರತೆ ವದಗಿಸುವ‌ ಕಾರ್ಯಕ್ಕೆ ಮಾತ್ರ ಮುಂದೆ ಸರ್ಕಾರ ಬಂದಿಲ್ಲ ಎಂದು‌ ಅಕ್ಷರ ದಾಸೋಹದ‌ ನೌಕರರು ಅಧಿಕಾರಿಗಳ ಮುಂದೆ ಅಳಲು ತೊಡಿಕೊಂಡರು.

ವಿಜಯಪುರದಲ್ಲಿ ಅಕ್ಷರ ದಾಸೋಹ ನೌಕರರ ಪ್ರತಿಭಟನೆ

By

Published : Oct 18, 2019, 10:43 PM IST

ವಿಜಯಪುರ: ಕನಿಷ್ಠ ವೇತನ‌, ಕೆಲಸದ ಭದ್ರತೆ ಎಲ್​ಐಸಿ ಜಾರಿಗೊಳೊಸುವಂತೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ‌ ನಡೆಸಲಾಯಿತು.

ವಿಜಯಪುರದಲ್ಲಿ ಅಕ್ಷರ ದಾಸೋಹ ನೌಕರರ ಪ್ರತಿಭಟನೆ

ಜಿಲ್ಲಾ ಪಂಚಾಯತ್​ ಕಚೇರಿ ಮುಂಭಾಗದಲ್ಲಿ‌ ಧರಣಿ‌‌ ನಡೆಸಿ ಕಳೆದ 17 ವರ್ಷಗಳಿಂದ ಸೂಕ್ತವಾದ ಕೂಲಿ‌ ನೀಡುತ್ತಿಲ್ಲ . ಹಲವು ಬಾರಿ ಪ್ರತಿಭಟನೆ ನಡೆಸಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಪಿಂಚಣಿ ನೀಡುತ್ತೇವೆ ಎಂದು ಅಧಿಕಾರಿಗಳು‌ ಕೇವಲ ಹೇಳಿಕೊಂಡೇ ಬರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ‌ ಪ್ರತಿಭಟನಾ‌ಕಾರರ ಮನವಿ ಸ್ವಿಕರಿಸಿದ ಜಿಲ್ಲಾ ಪಂಚಾಯತ್​ ಕಾರ್ಯನಿರ್ವಾಹಕ ಅಧಿಕಾರಿ‌ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು‌‌ ತಿಳಿಸುವುದಾಗಿ ಭರವಸೆ ನೀಡಿದರು.

ABOUT THE AUTHOR

...view details