ಕರ್ನಾಟಕ

karnataka

ETV Bharat / state

ಖಾಯಂ ಸಿಬ್ಬಂದಿ ಇಲ್ಲದೆ ಸೊರಗುತ್ತಿದೆ ‌ಅಕ್ಕಮಹಾದೇವಿ ವಿವಿ - vijayapura latest news

ಸದ್ಯ ವಿವಿಯಲ್ಲಿ 144 ಬೋಧಕೇತರ ಸಿಬ್ಬಂದಿ ಹಾಗೂ 73 ಬೋಧಕ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಬೋಧಕೇತರ 144 ಸಿಬ್ಬಂದಿ ಪೈಕಿ ಕೇವಲ 13 ಸಿಬ್ಬಂದಿ ಮಾತ್ರ ಖಾಯಂ ಸಿಬ್ಬಂದಿಗಳಿದ್ದಾರೆ. ಬೋಧಕ ಸಿಬ್ಬಂದಿಗಳಲ್ಲಿ 35 ಸಿಬ್ಬಂದಿ ಖಾಯಂ ಸಿಬ್ಬಂದಿಯಾಗಿದ್ದಾರೆ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇರಿ 169 ಸಿಬ್ಬಂದಿಯು ತಾತ್ಕಾಲಿಕ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.

akkamahadevi university has no much permanent staff
ಖಾಯಂ ಸಿಬ್ಬಂದಿ ಇಲ್ಲದೆ ಸೊರಗುತ್ತಿದೆ ‌ಅಕ್ಕಮಹಾದೇವಿ ವಿವಿ

By

Published : Mar 3, 2021, 3:17 PM IST

ವಿಜಯಪುರ: ‌ಅಕ್ಕಮಹಾದೇವಿ ವಿವಿ ಆರಂಭಗೊಂಡು ಸುಮಾರು 18 ವರ್ಷ ಕಳೆದಿದೆ. ಆದರೆ ಈವರೆಗೆ ಆಡಳಿತ ಚುರುಕುಗೊಂಡಿಲ್ಲ. ಸಿಬ್ಬಂದಿ ಕೊರತೆಯೇ ಇದಕ್ಕೆ ಮುಖ್ಯ ಕಾರಣ ಎನ್ನುವುದು ಸಾಮಾನ್ಯ ಆರೋಪವಾಗಿದೆ.

ಬೋಧಕೇತರ ಸಿಬ್ಬಂದಿ ನೇಮಕಾತಿಯನ್ನು ಕಳೆದ ಹಲವು ವರ್ಷಗಳಿಂದ ಸರ್ಕಾರ ಮಾಡದಿರುವ ಕಾರಣ ಆಡಳಿತ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಲವು ಸಂಶೋಧನೆ, ಹೊಸ ಕೋರ್ಸ್ ಪರಿಚಯಿಸಲು ಅನಾನುಕೂಲವಾಗುತ್ತಿದೆ.

ಮಹಿಳಾ ಸಬಲೀಕರಣಕ್ಕಾಗಿ ಮಹಿಳೆಯರಿಗೆ ಪ್ರತ್ಯೇಕ ವಿಶ್ವ ವಿದ್ಯಾಲಯವನ್ನು 2003ರಲ್ಲಿ ವಿಜಯಪುರದಲ್ಲಿ ಆರಂಭಿಸಲಾಯಿತು. ಸ್ವಂತ ಕಟ್ಟಡವಿಲ್ಲದೇ ಆರಂಭಗೊಂಡ ಮಹಿಳಾ ವಿವಿ ತನ್ನ ಬೆರಳಿಕೆಯಷ್ಟು ಸಿಬ್ಬಂದಿ ಪರಿಶ್ರಮದಿಂದ ನಗರದ ಹೊರವಲಯದ ತೊರವಿಯಲ್ಲಿ ತನ್ನದೇ ಕ್ಯಾಂಪಸ್ ನಿರ್ಮಿಸಿಕೊಂಡು ರಾಜ್ಯಕ್ಕೆ ಮಾದರಿ ವಿಶ್ವವಿದ್ಯಾಲಯವಾಗಿದೆ. ಆದರೆ ಅಂದು ವಿಶ್ವವಿದ್ಯಾಲಯದ ಬೆಳವಣಿಗೆಗೆ ಕಾರಣವಾಗಿದ್ದ ಸಿಬ್ಬಂದಿ ಇನ್ನೂ ತಾತ್ಕಾಲಿಕ ಉದ್ಯೋಗಿಗಳಾಗಿಯೇ ಉಳಿದಿದ್ದಾರೆ.

ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲಾ

ಒಟ್ಟು ನಾಲ್ವರು ಕುಲಪತಿಗಳು ಮಹಿಳಾ ವಿವಿಯಲ್ಲಿ‌ ಕೆಲಸ ಮಾಡಿದ್ದಾರೆ. ಸದ್ಯ ವಿವಿಯಲ್ಲಿ 144 ಬೋಧಕೇತರ ಸಿಬ್ಬಂದಿ ಹಾಗೂ 73 ಬೋಧಕ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಬೋಧಕೇತರ 144 ಸಿಬ್ಬಂದಿ ಪೈಕಿ ಕೇವಲ 13 ಸಿಬ್ಬಂದಿ ಮಾತ್ರ ಖಾಯಂ ಸಿಬ್ಬಂದಿಗಳಿದ್ದಾರೆ. ಬೋಧಕ ಸಿಬ್ಬಂದಿಗಳಲ್ಲಿ 35 ಸಿಬ್ಬಂದಿ ಖಾಯಂ ಸಿಬ್ಬಂದಿಯಾಗಿದ್ದಾರೆ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇರಿ 169 ಸಿಬ್ಬಂದಿಯು ತಾತ್ಕಾಲಿಕ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.

ಇವರಿಗೆ ಯಾವುದೇ ಸೇವಾ ಭದ್ರತೆ ಇಲ್ಲ. ಆರ್ಥಿಕ ಬಿಕ್ಕಟ್ಟು ಎದುರಾದರೆ ಮೊದಲು ಬಲಿಪಶುಗಳಾಗುವರು ಇವರೇ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲಾ, ಸಕ್ಷಮ ಪ್ರಾಧಿಕಾರ ಮೂಲಕ ಸಹಾನುಭೂತಿ ಆಧಾರದಲ್ಲಿ ರಾಜ್ಯ ಸರ್ಕಾರ ಈ ಸಮಸ್ಯೆ ಸರಿಪಡಿಸಬೇಕು.‌ ಮಹಿಳಾ ವಿವಿಯಿಂದ ಸಾಕಷ್ಟು ಬಾರಿ ಸರ್ಕಾರಕ್ಕೆ, ಸಿಬ್ಬಂದಿ ಖಾಯಂ ಕುರಿತು ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಓದಿ:ಆಶಾದಾಯಕ: ರಾಜ್ಯದಲ್ಲಿ ಸಿಸೇರಿಯನ್​ಗಿಂತ​ ಸಾಮಾನ್ಯ ಹೆರಿಗೆ ಪ್ರಮಾಣವೇ ಹೆಚ್ಚು!

ತಾತ್ಕಾಲಿಕ ಸಿಬ್ಬಂದಿಯನ್ನು ಖಾಯಂಗೊಳಿಸಲು ಕಡತಗಳನ್ನು ಸಚಿವ ಸಂಪುಟದ ಮುಂದೆ ಇಡುವ ಅವಶ್ಯಕತೆ ಇಲ್ಲ. ವಾರ್ಷಿಕವಾಗಿ 2 ಕೋಟಿ ರೂ. ಗಳಷ್ಟು ಹೆಚ್ಚುವರಿ ಹೊರೆಯನ್ನು ರಾಜ್ಯ ಸರ್ಕಾರ ಹೊರಬೇಕಾಗುತ್ತದೆ. ತಾತ್ಕಾಲಿಕ ಸಿಬ್ಬಂದಿಯನ್ನೇ ಖಾಯಂಗೊಳಿಸಿದರೆ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ತರಬಹುದು. ಈಗ ಕುಂಟುತ್ತಾ ಸಾಗುತ್ತಿರುವ ವಿವಿಯ ಆಡಳಿತ ವೇಗ ಹೆಚ್ಚಿಸಿ, ಆಡಳಿತದಲ್ಲಿ ಪಾರದರ್ಶಕತೆ ತರಬಹುದು. ಇದರ ಜತೆಗೆ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಸ್ವ ಉದ್ಯೋಗ ಮಾಡುವ ಹೊಸ ಕೋರ್ಸ್​​ಗಳನ್ನು ಮಹಿಳಾ ವಿವಿಯಲ್ಲಿ ಪರಿಚಯಿಸಿ ಮತ್ತಷ್ಟು ಯುವತಿಯರನ್ನು ಉನ್ನತ ವ್ಯಾಸಂಗ ಮಾಡಲು ಪ್ರೇರೇಪಿಸಬಹುದಾಗಿದೆ. ಸರ್ಕಾರ ಇಲ್ಲವೇ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ರಾಜ್ಯಪಾಲ ವಜುಬಾಯಿ ವಾಲಾ ಇತ್ತ ಗಮನ ಹರಿಸಬೇಕಾಗಿದೆ ಎಂದರು.

ABOUT THE AUTHOR

...view details