ಕರ್ನಾಟಕ

karnataka

ETV Bharat / state

ರಾಜ್ಯದ ಏಕೈಕ ಮಹಿಳಾ ವಿವಿಯಲ್ಲಿ ಆನ್‌ಲೈನ್‌ ಘಟಿಕೋತ್ಸವ, ಚಿನ್ನದ ಪದಕ ಪ್ರದಾನ - ವಿಜಯಪುರ ಜಿಲ್ಲೆ ಸುದ್ದಿ

ಕನ್ನಡ ಅಧ್ಯಯನ ವಿಭಾಗದಲ್ಲಿ 4 ಚಿನ್ನದ ಪದಕ ಪಡೆದ ಪದ್ಮಾವತಿ, ಬಡತನ ಸಾಧನೆಗೆ ಅಡ್ಡಿ ಬರುವುದಿಲ್ಲ. ಕೃಷಿಕರಾಗಿದ್ದಕ್ಕೆ ಸಾಧನೆ ಮಾಡಲು ಸಾಧ್ಯವಾಯಿತು‌ ಎಂದು ಸಂತಸಗೊಂಡರು..

akkamahadevi-university-11th-annual-convocation-online
ರಾಜ್ಯದ ಏಕೈಕ ಮಹಿಳಾ ವಿವಿಯಲ್ಲಿ ಆನ್‌ಲೈನ್‌ ಘಟಿಕೋತ್ಸವ, ಚಿನ್ನದ ಪದಕ ಪ್ರದಾನ

By

Published : Sep 19, 2020, 6:34 PM IST

Updated : Sep 19, 2020, 7:04 PM IST

ವಿಜಯಪುರ: ರಾಜ್ಯದ ಏಕೈಕ ಮಹಿಳಾ ವಿವಿಯಲ್ಲಿ 11ನೇ ವಾರ್ಷಿಕ ಘಟಿಕೋತ್ಸವ ನಡೆಸಲಾಯಿತು. ‌ಕೊರೊನಾ ಭೀತಿಯಿಂದ‌ ಇದೇ ಮೊದಲ ಬಾರಿಗೆ ವಿವಿಯ ಜ್ಞಾನ ಶಕ್ತಿ ಆವರಣದಲ್ಲಿ ಆನ್‌ಲೈನ್‌ ಘಟಿಕೋತ್ಸವ ನಡೆಸಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.

ರಾಜ್ಯದ ಏಕೈಕ ಮಹಿಳಾ ವಿವಿಯಲ್ಲಿ ಆನ್‌ಲೈನ್‌ ಘಟಿಕೋತ್ಸವ, ಚಿನ್ನದ ಪದಕ ಪ್ರದಾನ

ಕೊರೊನಾ ವೈರಸ್ ಇಡೀ ಶಿಕ್ಷಣ ವ್ಯವಸ್ಥೆ ಬುಡಮೇಲು‌‌ ಮಾಡಿದೆ. ಹೀಗಾಗಿ, ಗುಮ್ಮಟನಗರಿಯ ರಾಜ್ಯದ ಏಕೈಕ ಮಹಿಳಾ ವಿವಿ ಎಂದೇ ಖ್ಯಾತಿಗೆ ಪಾತ್ರವಾದ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಹಂಗಾಮಿ ಕುಲಪತಿ ಪ್ರೊ. ಓಂಕಾರ್ ಕಾಕಡೆ ನೇತೃತ್ವದಲ್ಲಿ 11ನೇ ಘಟಿಕೋತ್ಸವ ಮಾಡಲಾಯಿತು.

ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ‌ ಕಾರ್ಯಕ್ರಮವನ್ನ ವಿವಿಯ ಆಡಳಿತ ಮಂಡಳಿ ಆಯೋಜಿಸಿತ್ತು.‌ ಘಟಿಕೋತ್ಸವದ ಅತಿಥಿಯಾಗಿ ಯುಜಿಸಿ ಸದಸ್ಯರು ಹಾಗೂ ಶಿಕ್ಷಣ ತಜ್ಞ ಪ್ರೊ ಎಂ ಕೆ ಶ್ರೀಧರ ಆನ್‌ಲೈನ್ ಮೂಲಕ ಕಾರ್ಯಕ್ರಮ ಉದ್ದೇಶಿ ಮಾತನಾಡಿದರು. ಬಸವನಾಡಿನಲ್ಲಿ ಮಹಿಳಾ ವಿವಿ‌‌ ಹೆಣ್ಣು ಮಕ್ಕಳ ಜ್ಞಾನಕ್ಕೆ ಒಂದು ನಿದರ್ಶನ. ಎಲ್ಲ ಕೆಲಸವನ್ನ‌ ಮಹಿಳೆಯರು ಅಚ್ಚುಕಟ್ಟಾಗಿ ನಿಭಾಯಿಸುವ ಶಕ್ತಿಯಿದೆ ಎಂದರು.

ಬಳಿಕ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಸಾಧನೆ‌ ಮಾಡಿದ ವಿದ್ಯಾರ್ಥಿನಿಯರಿಗೆ ಚಿನ್ನ ಪದಕ ನೀಡಿ ಗೌರವಿಸಲಾಯಿತು. ಕನ್ನಡ ಅಧ್ಯಯನ ವಿಭಾಗದಲ್ಲಿ 4 ಚಿನ್ನದ ಪದಕ ಪಡೆದ ಪದ್ಮಾವತಿ, ಬಡತನ ಸಾಧನೆಗೆ ಅಡ್ಡಿ ಬರುವುದಿಲ್ಲ. ಕೃಷಿಕರಾಗಿದ್ದಕ್ಕೆ ಸಾಧನೆ ಮಾಡಲು ಸಾಧ್ಯವಾಯಿತು‌ ಎಂದು ಸಂತಸಗೊಂಡರು.

ಕೊರೊನಾ‌ ತಡೆಗೆ ಸರ್ಕಾರ ವಿಧಿಸಿದ ನಿಯಮಗಳ ಪ್ರಕಾರ ಆಯ್ದ ಆಹ್ವಾನಿತರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಯಿತು‌‌. ಪದವಿ ಹಾಗೂ ಸ್ನಾತಕೋತ್ತರದ ವಿವಿಧ ವಿಭಾಗದ ವಿಷಯಗಳಲ್ಲಿ ಸಾಧನೆ‌‌ ಮಾಡಿದ 65 ವಿದ್ಯಾರ್ಥಿನಿಯರಿಗೆ ವಿವಿಯ ಆಡಳಿತ ಮಂಡಳಿ ಚಿನ್ನದ ಪದಕ ನೀಡಿ ಗೌರವಿಸಿದೆ. ಕಾರ್ಯಕ್ರಮದಲ್ಲಿ 55 ವಿದ್ಯಾರ್ಥಿಗಳಿಗೆ ಪಿಹೆಚ್​ಡಿ ಪ್ರದಾನ ಮಾಡಲಾಯಿತು.

ರಾಯಚೂರಿನ ಪದ್ಮಾವತಿ ಯತಗಲ್ಲ ಕನ್ನಡ ಅಧ್ಯಯನ ವಿಭಾಗದಲ್ಲಿ 4 ಚಿನ್ನದ ಪದಕ, ಅರ್ಥಶಾಸ್ತ್ರ ವಿಭಾಗದಲ್ಲಿ ಬೆಳಗಾವಿಯ ಜಯಶ್ರೀ ಬಡಕಪ್ಪನವರ್ 4 ಚಿನ್ನದ ಪದಕ ಪಡೆದ್ರೆ, ಇತ್ತ ಅಕ್ಷತಾ ಗುಜ್ಜಣ್ಣವರ ಆಹಾರ ಸಂಸ್ಕರಣೆ ಮತ್ತು ಪೋಷಕಾಂಶ ಅಧ್ಯಯನ ವಿಭಾಗದಲ್ಲಿ 3 ಚಿನ್ನದ ಪದಕ ಪಡೆದು ರಾಜ್ಯಕ್ಕೆ ತಮ್ಮ ಸಾಧನೆ ತೋರಿಸಿದ್ದಾರೆ. ಇತ್ತ ಕಾರ್ಯಕ್ರಮಕ್ಕೆ ಕುಲಸಚಿವೆ ಪ್ರೊ. ಸುನಂದಮ್ಮಾ, ಮೌಲ್ಯಮಾಪನ ಕುಲಸಚಿವ ಪಿ ಜಿ ತಡಸದ ಸೇರಿ ವಿವಿಯ ಸಿಂಡಿಕೇಟ್ ಸದಸ್ಯರು ಕಾರ್ಯಕ್ರಮಕ್ಕೆ ಸಾಥ್ ನೀಡಿದರು.

Last Updated : Sep 19, 2020, 7:04 PM IST

ABOUT THE AUTHOR

...view details