ಕರ್ನಾಟಕ

karnataka

ETV Bharat / state

ಗೊಬ್ಬರ ಅಂಗಡಿಗಳ ಮೇಲೆ ದಾಳಿ : ನಕಲಿ‌ ಗೊಬ್ಬರ ವಶ - ಗೊಬ್ಬರ ಅಂಗಡಿಗಳ ಮೇಲೆ ದಾಳಿ

ವಿಜಯಪುರ, ಇಂಡಿ, ಮುದ್ದೇಬಿಹಾಳ ಹಾಗೂ ಬಸವನ.ಬಾಗೇವಾಡಿ ತಾಲೂಕಿನ ಗೊಬ್ಬರ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ನಕಲಿ‌ ಗೊಬ್ಬರ ವಶಕ್ಕೆ ಪಡೆದಿದ್ದಾರೆ.

Fertiliser shop
Fertiliser shop

By

Published : Aug 29, 2020, 10:33 PM IST

ವಿಜಯಪುರ:2020ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳು ಬೆಳವಣಿಗೆ ಹಂತದಲ್ಲಿವೆ. ಈ ಹಂತದಲ್ಲಿ ನಕಲಿ ಜೈವಿಕ ಉತ್ಪನ್ನಗಳ ಮಾರಾಟ ಹೆಚ್ಚುವ ಸಾಧ್ಯತೆ ಇರುವ ಕಾರಣ ಕೃಷಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ಕೃಷಿ ನಿರ್ದೇಶಕ ಜಲಾನಿ ಮೊಕಾಶಿ ನೇತೃತ್ವದ ತಂಡ ಗೊಬ್ಬರ ಮಾರಾಟ ಮಳಿಗೆಗಳ ತಪಾಸಣೆ ನಡೆಸಿತು.

ಈ ಸಂಬಂಧ ಎರಡು ತಂಡಗಳನ್ನು ರಚಿಸಿ ವಿಜಯಪುರ, ಇಂಡಿ, ಮುದ್ದೇಬಿಹಾಳ ಹಾಗೂ ಬಸವನ.ಬಾಗೇವಾಡಿ ತಾಲೂಕಿನ ಮಾರಾಟ ಮಳಿಗೆಗಳನ್ನು ತಪಾಸಣೆ ಕೈಗೊಳ್ಳಲಾಯಿತು. ತಪಾಸಣೆ ವೇಳೆ ಇಂಡಿ ತಾಲೂಕಿನ ಒಂದು ಮಾರಾಟ ಮಳಿಗೆ ಹಾಗೂ ಮುದ್ದೇಬಿಹಾಳ ತಾಲೂಕಿನ ಒಂದು ಮಾರಾಟ ಮಳಿಗೆ ಮತ್ತು ನಕಲಿ ಗೊಬ್ಬರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವಿಜಯಪುರ ಜಂಟಿ ಕೃಷಿ ನಿರ್ದೇಶಕ ಡಾ. ಡಿ.ಡಬ್ಲ್ಯೂ ರಾಜಶೇಖರ ತಿಳಿಸಿದ್ದಾರೆ.

ಈ ಮಾರಾಟ ಮಳಿಗೆಗಳು ನ್ಯೂನ್ಯತೆಗಳನ್ನು ಸರಿಪಡಿಸದಿದ್ದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಕ್ರಮ ವಹಿಸಲಾಗುವುದು. ಈ ಮೂಲಕ ಜಿಲ್ಲೆಯ ಎಲ್ಲ ಕೃಷಿ ಪರಿಕರ ಮಾರಾಟಗಾರರಿಗೆ ತಮ್ಮ ಪರಿಕರಗಳನ್ನು ಸಂಬಂಧಿಸಿದ ನಿಯಮಗಳಂತೆ ಮಾರಾಟ ಮಾಡಲು ಸೂಚನೆ ನೀಡಲಾಗಿದೆ. ಜತೆಗೆ ನಕಲಿ ಕೀಟನಾಶಕ ಹಾಗೂ ನಕಲಿ ಜೈವಿಕ ಉತ್ಪನ್ನಗಳನ್ನು ಮಾರಾಟ ಮಾಡಿ ರೈತರಿಗೆ ವಂಚಿಸಿದಲ್ಲಿ ಕೂಡಲೇ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.

ರೈತರು ಕೀಟನಾಶಕಗಳನ್ನು ಅಧಿಕೃತ ಮಾರಾಟ ಪರವಾನಿಗೆ ಪಡೆದಿರುವ ಮಳಿಗೆಗಳಿಂದಲೇ ಖರೀದಿಸಲು ಹಾಗೂ ಖರೀದಿಸುವ ಕೀಟನಾಶಕಗಳ ಮೇಲೆ ಮುದ್ರಿಸಿರುವ ಲೇಬಲ್ ಪರಿಶೀಲಿಸಿಕೊಂಡು ಕಡ್ಡಾಯವಾಗಿ ರಸೀದಿ ಯನ್ನು ಪಡೆಯಲು ತಿಳಿಸಲಾಗಿದೆ. ಒಂದು ವೇಳೆ ಅನುಮಾನವಿದ್ದಲ್ಲಿ ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರು, ಮಾಹಿತಿ ನೀಡುವಂತೆ ಅವರು ತಿಳಿಸಿದ್ದಾರೆ.

ABOUT THE AUTHOR

...view details